ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಮುಂದುವರಿದಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳು ತಿನ್ನಲು ತಿಂಡಿಯನ್ನು ಕೇಳುತ್ತಿರುತ್ತಾರೆ. ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಕಷ್ಟ. ಹೀಗಾಗಿ ಮನೆಯಲ್ಲಿ ಆಲೂಗೆಡ್ಡೆ, ರವೆ ಇದ್ದೆ ಇರುತ್ತದೆ. ಅದರಲ್ಲಿ ಕ್ರಿಸ್ಪಿ ಆಲೂ, ರವೆ ಫಿಂಗರ್ ಚಿಪ್ಸ್ ಮಾಡಿ ಕೊಡಿ. ಆಲೂ, ರವೆ ಫಿಂಗರ್ ಚಿಪ್ಸ್ ಮಾಡುವ ವಿಧಾನ ನಿಮಗಾಗಿ?
Advertisement
ಬೇಕಾಗುವ ಸಾಮಗ್ರಿಗಳು
1. ಸಣ್ಣ ರವೆ – 1 ಕಪ್
2. ಆಲೂಗಡ್ಡೆ – 2
3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
4. ಕೋತ್ತಂಬರಿ ಸೊಪ್ಪು -ಸ್ವಲ್ಪ
5. ಕಾಳು ಮೆಣಸು ಪುಡಿ – 1/2 ಚಮಚ
6. ಒಣ ಮೆಣಸಿನಕಾಯಿ ಪುಡಿ – 1/2 ಚಮಚ
7. ಜೀರಿಗೆ – 1 ಚಮಚ
8. ಅರಿಶಿಣ – 1/2 ಟೀ ಸ್ಪೂನ್
9. ಎಣ್ಣೆ
10. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಆಲೂಗಡ್ಡೆ ಬೇಯಿಸಿಕೊಂಡು ಚಪಾತಿ ಹಿಟ್ಟಿನಂತೆ ಕಲಸಿಕೊಂಡು ಎತ್ತಿಡಿ.
* ಗ್ಯಾಸ್ ಆನ್ ಮಾಡಿಕೊಂಡು ಪ್ಯಾನ್‍ಗೆ ಒಂದು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಂದೂವರೆ ಕಪ್ ನೀರು ಹಾಕಿ, ಸ್ವಲ್ಪ ಉಪ್ಪು ಹಾಕಿ ಕುದಿಸಿಕೊಳ್ಳಿ.
* ನೀರು ಕುದಿಯುತ್ತಿದ್ದಂತೆ ರವೆ ಹಾಕಿ ಗಂಟು ಬರದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ರವೆ ಮಿಶ್ರಣ ತಣ್ಣಗಾಗುತ್ತಿದ್ದಂತೆ ಆಲೂಗಡ್ಡೆಯ ಪೇಸ್ಟ್ ಸೇರಿಸಿ. ಈಗ ಕಾಳು ಮೆಣಸು ಪುಡಿ, ಉಪ್ಪು (ಮೊದಲು ಸ್ವಲ್ಪ ಹಾಕಿರುವುದರಿಂದ ನೋಡಿಕೊಂಡು ಹಾಕಿ), ಒಣ ಮೆಣಸಿನಕಾಯಿ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
Advertisement
* ಒಂದು ಪ್ಯಾನ್‍ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ, ಕಾಯಲು ಬಿಡಿ.
* ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ರವೆ-ಆಲೂಗಡ್ಡೆ ಮಿಶ್ರಣದಿಂದ ಫಿಂಗರ್ ಚಿಪ್ಸ್ ನಂತೆ ಮಾಡಿ.
* ಬಿಸಿಯಾದ ಎಣ್ಣೆಗೆ ಅದನ್ನು ಹಾಕಿ ಕರಿದರೆ ಕ್ರಿಸ್ಪಿ ಆಲೂ ಫಿಂಗರ್ ಚಿಪ್ಸ್ ರೆಡಿ.