ಲಕ್ನೋ: ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಉತ್ತರ ಪ್ರದೇಶದ ಪಾತಕಿ ಖನ್ನಾ ಉತ್ತರಪ್ರದೇಶದ ಆಮ್‍ರೋಹಾ ಜಿಲ್ಲೆಯ ಪೊಲೀಸರಿಗೆ ಬುಧವಾರ ಶರಣಾಗಿದ್ದಾನೆ.
ತನ್ನ ಕತ್ತಿಗೆ ಫಲಕವನ್ನು ನೇತು ಹಾಕಿಕೊಂಡು ಬಂದ ಆತ ಅದರಲ್ಲಿ ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ:ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!
ಫಲಕ ಹಾಕಿಕೊಂಡು ಶರಣಾದ ಆರೋಪಿಯು ಫೈಜಾನ್ ಅಹ್ಮದ್ ಅಲಿಯಾಸ್ ಖನ್ನಾ ಸಂಭಾಲ್ ಜಿಲ್ಲೆಯ ನಖಾನಾ ಪೊಲೀಸ್ ಠಾಣೆ ವ್ಯಾಪ್ತಿಯ ದೀಪ್ ಸರಾಯ್ ಗ್ರಾಮದ ನಿವಾಸಿ. ಇವನ ವಿರುದ್ಧ ಕೊಲೆ ಮತ್ತು ದರೋಡೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2014 ರಿಂದಲೂ ತಲೆಮರೆಸಿಕೊಂಡು ಪೊಲೀಸರಿಂದ ಬಜಾವ್ ಆಗಿದ್ದ ಇವನ ತಲೆಗೆ 12 ಸಾವಿರ ರೂ. ಬಹುಮಾನ ಘೋಷಣೆಯಾಗಿತ್ತು. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು
ಸದ್ಯ ಈತ ತನ್ನನ್ನು ಪೊಲೀಸರು ಎನ್‍ಕೌಂಟರ್ ಮಾಡುತ್ತಾರೆ ಎಂಬ ಭಯದಿಂದಾಗಿ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಶರಣಾಗುವ ಮುನ್ನ ಅವನು ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಪೊಲೀಸರು ಆತನನ್ನು ಬಂಧಿಸಿ ಈಗ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು