ದಾವಣಗೆರೆ: ಕೈದಿಯೊಬ್ಬ ತೆಂಗಿನಮರ ಏರಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ದಾವಣಗೆರೆಯ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ನಿಂಗಪ್ಪ ಇಂದು ಬೆಳಗ್ಗೆ ಮರವೇರಿ ಕುಳಿತ ಕೈದಿ. ಈತ ಕಾರಾಗೃಹದ ಆವರಣದಲ್ಲಿದ್ದ ಮೂವತ್ತು ಅಡಿ ಎತ್ತರದ ತೆಂಗಿನ ಮರವೇರಿ ಕುಳಿತಿದ್ದು, ಕೆಳಗೆ ಇಳಿಸಲು ಎಷ್ಟು ಪ್ರಯತ್ನ ಪಟ್ಟರೂ ಇಳಿಯಲು ಒಪ್ಪುತ್ತಿರಲಿಲ್ಲ. ಅಲ್ಲದೇ ಯಾವ ಕಾರಣಕ್ಕೆ ಮರವೇರಿ ಕುಳಿತಿದ್ದಾನೆ ಎಂದು ತಿಳಿದುಬಂದಿಲ್ಲ.
ಕೈದಿ ಹನುಮಂತ ಬೆಳಗ್ಗೆಯಿಂದ ಮರದಲ್ಲೇ ಕುಳಿತಿದ್ದು, ಆತನನ್ನು ಮರದಿಂದ ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟರು. ಕೈದಿ ಹನುಮಂತನನ್ನು ಕೆಳಗಿಳಿಸಲು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದರು. ಕೈದಿ ಬೆಳಗ್ಗೆಯಿಂದ ತೆಂಗಿನಮರ ಏರಿ ಕುಳಿತಿದ್ದನು. ಮರವೇರಿದ ಕೈದಿ ನಂತರ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಕೈದಿ ನಿಂಗಪ್ಪನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು.
ಸದ್ಯ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೈದಿ ನಿಂಗಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕಾಲು ಜಾರಿ ಕೆಳಗೆ ಬಿದ್ದಿದ್ದ ನಿಂಗಪ್ಪ ಬಲೆ ಇದ್ದರೂ ತಲೆ ನೆಲಕ್ಕೆ ಬಡಿದು ಪೆಟ್ಟು ಬಿದ್ದು, ಗಂಭೀರ ಗಾಯಗೊಂಡಿದ್ದನು.