– ಕಳೆದ ವರ್ಷದ ಒಂದು ತಿಂಗಳಲ್ಲಿ 1,503 ಈಗ 260 ಪ್ರಕರಣ
– ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ
ಚಂಡೀಗಢ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಇಡೀ ದೇಶದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮನೆಯೊಳಗಿದ್ದಾರೆ. ಇದರಿಂದಾಗಿ ಅಪರಾಧ ಪ್ರಕರಣಗಳು ಕೂಡ ಕಡಿಮೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಗುರುಗ್ರಾಮ್‍ನಲ್ಲಿ ಲಾಕ್‍ಡೌನ್‍ನಿಂದಾಗಿ ಅತ್ಯಾಚಾರ, ಕೊಲೆ, ಕಳ್ಳತನ ಮತ್ತು ದರೋಡೆ ಮುಂತಾದ ಅಪರಾಧಗಳಲ್ಲಿ ಶೇ.80ಕ್ಕಿಂತಲೂ ಕಡಿಮೆಯಾಗಿದೆ. 2019 ರಲ್ಲಿ ಇದೇ ಅವಧಿಯಲ್ಲಿ ನಡೆದ ಅಪರಾಧಗಳಿಗೆ ಹೋಲಿಸಿದರೆ ಮಾರ್ಚ್ 25 ರಿಂದ ಏಪ್ರಿಲ್ 15 ರವರೆಗೆ ದಾಖಲಾದ ಅಪರಾಧಗಳು ಶೇ.80ಕ್ಕಿಂತಲೂ ಕಡಿಮೆಯಾಗಿದೆ ಎಂದು ಪೊಲೀಸರು ಹೇಳಿದರು.
Advertisement
Advertisement
ಮಾರ್ಚ್ 25 ರಿಂದ ಏಪ್ರಿಲ್ 15 ರವರೆಗೆ 625 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಕಳೆದ ವರ್ಷ ಈ ಇದೇ ಸಮಯದಲ್ಲಿ 1,503 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಈ ವರ್ಷ ದಾಖಲಾದ 625 ಪ್ರಕರಣಗಳಲ್ಲಿ 365 ಪ್ರಕರಣಗಳು ಕೊರೊನಾ ವೈರಸ್ ಲಾಕ್‍ಡೌನ್ ಉಲ್ಲಂಘನೆಗೆ ಸಂಬಂಧಿಸಿವೆ. ಹೀಗಾಗಿ ಒಟ್ಟು 260 ಮಾತ್ರ ಎಫ್‍ಐಆರ್ ದಾಖಲಾಗಿದೆ. ಇದು 2019 ರಲ್ಲಿ ದಾಖಲಾದ ಎಫ್‌ಐಆರ್‌ಗಳ ಸಂಖ್ಯೆಗೆ ಹೋಲಿಸಿದರೆ ಶೇ.83ರಷ್ಟು ಕಡಿಮೆಯಾಗಿದೆ.
Advertisement
ಕಿಕ್ಕಿರಿದ ಬೀದಿಗಳು ಮತ್ತು ಜನರ ಓಡಾಟದಿಂದ ಅಪರಾಧಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಈಗ ಜನರು ಮನೆಯಲ್ಲಿದ್ದಾರೆ ಮತ್ತು ಪೊಲೀಸರು ಬೀದಿಯಲ್ಲಿ ಕರ್ತವ್ಯ ಮಾಡುತ್ತಿರುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ವಾಹನಗಳ ಸಂಚಾರ ನಿರ್ಬಂಧದಿಂದಲೂ ಅಪರಾಧ ಕಡಿಮೆಯಾಗಿವೆ ಎಂದು ಗುರುಗ್ರಾಮ್ ಪೊಲೀಸ್ ಆಯುಕ್ತ ಮೊಹಮ್ಮದ್ ಅಕಿಲ್ ತಿಳಿಸಿದರು.
Advertisement
ಈ ವರ್ಷ ಕೇವಲ 16 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 275 ಪ್ರಕರಣಗಳು ಬೆಳಕಿಗೆ ಬಂದಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳ್ಳರನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ವಾಹನಗಳನ್ನು ಮಾರುಕಟ್ಟೆ ಪ್ರದೇಶಗಳಲ್ಲಿ ನಿಲ್ಲಿಸಲಾಗಿದೆ. ಯಾಕೆಂದರೆ ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಜೊತೆಗೆ ನಗರದಾದ್ಯಂತ ಪೊಲೀಸ್ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹೀಗಾಗಿ ಕಳ್ಳರು ವಾಹನ ಕಳ್ಳತನ ಮಾಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿ ಹೇಳಿದರು.
ಆದರೂ ಈ ವರ್ಷ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮಾರ್ಚ್ 25 ರಿಂದ ಏಪ್ರಿಲ್ 15 ರವರೆಗೆ 59 ವಂಚನೆ ಪ್ರಕರಣಗಳು ದಾಖಲಾಗಿದ್ದಾವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 11 ಪ್ರಕರಣ ದಾಖಲಾಗಿತ್ತು.