– ಮದುವೆಯಾಗಿ ಮಗು ಇದ್ರೂ ಪಿಜಿಯಲ್ಲಿದ್ದ ಪಾತಕಿ
ಬೆಂಗಳೂರು: ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ವೈಟ್ ಫೀಲ್ಡ್‌ನಲ್ಲಿರುವ (Whitefield) ಕೋ ಲಿವಿಂಗ್ ಪಿಜಿಯಲ್ಲಿ (Co-living PG) ನಡೆದಿದೆ.
ಚಾಕು ಇರಿದ ಆರೋಪಿಯನ್ನು ಬಾಬು ಎಂದು ಗುರುತಿಸಲಾಗಿದೆ. ಈತ ಸಾಫ್ಟ್‌ವೇರ್ ಇಂಜಿನಿಯರ್ (Techie) ಆಗಿದ್ದು, ಮುದುವೆಯಾಗಿ ಮಗುವಿದೆ. ಆದರೂ ಒಬ್ಬನೇ ಪಿಜಿಯಲ್ಲಿ ವಾಸವಿದ್ದ. ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಬಂದು ವಾಸವಿದ್ದ ಯುವತಿಯನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದ. ಆಕೆಯ ಮೊಬೈಲ್ ನಂಬರ್ ಪಡೆದು ಫೋನ್ ಮಾಡಿ ಮಾತನಾಡುತ್ತಿದ್ದನಂತೆ. ಕಳೆದ ಮೂರು ದಿನದ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ, ಆಕೆಯ ಖಾಸಗಿ ಫೋಟೊ ಇಟ್ಟುಕೊಂಡು 70 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅಮೆರಿಕ ಪೊಲೀಸರ ಗುಂಡೇಟಿಗೆ ಭಾರತೀಯ ಟೆಕ್ಕಿ ಬಲಿ
ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರ ಬಳಿ ಸಾಲ ಮಾಡಿ ಕೊಡುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ಆಕೆಯ ಮೊಬೈಲ್ ಪಡೆದು 14 ಸಾವಿರ ರೂ. ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಗಲಾಟೆ ಮಾಡಿ ಯುವತಿಯ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಗಾಯಾಳು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಸಿಎಂ ನಿಂದಿಸಿದ್ದ ನಿವೃತ್ತ ಯೋಧನ ಬಂಧನ