ಮುಂಬೈ: ಬೇರೊಬ್ಬಳನ್ನು ಮದುವೆಯಾಗಲು ಪ್ರೇಯಸಿ (Lover) ಅಡ್ಡಿಯಾಗುತ್ತಾಳೆ ಎಂದು ಪ್ರಿಯಕರನೇ ಆಕೆಯನ್ನು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ರತ್ನಗಿರಿಯಲ್ಲಿ ನಡೆದಿದೆ. ಕೊಲೆಯ ಬಳಿಕ ಮೃತದೇಹವನ್ನು ಆರೋಪಿ ಹಳ್ಳಕ್ಕೆ ಎಸೆದಿದ್ದ ಎಂದು ತಿಳಿದುಬಂದಿದೆ.
ಕೊಲೆಯಾದ ಯುವತಿಯನ್ನು ಭಕ್ತಿ ಜಿತೇಂದ್ರ ಮಾಯೇಕರ್ (26) ಎಂದು ಗುರುತಿಸಲಾಗಿದೆ. ಆಕೆ ಆ.17ರಂದು ತನ್ನ ಗೆಳೆಯನನ್ನು ಭೇಟಿಯಾಗುವುದಾಗಿ ತಿಳಿಸಿ ತೆರಳಿದ್ದಳು. ಬಳಿಕ ಯುವತಿ ನಾಪತ್ತೆಯಾಗಿದ್ದಳು. ಈ ಸಂಬಂಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಪೊಲೀಸರು ಆಕೆಯ ಮೊಬೈಲ್ ಕರೆ ವಿವರಗಳ ಆಧಾರದ ಮೇಲೆ ಆರೋಪಿ ದುರ್ವಾಸ್ ದರ್ಶನ್ ಪಾಟೀಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್
ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಆಕೆಯ ಶವವನ್ನು ಅಂಬಾ ಘಾಟ್‌ನಲ್ಲಿ ಎಸೆದಿದ್ದಾಗಿ ತಿಳಿದ್ದಾನೆ. ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗುವ ವಿಚಾರಕ್ಕೆ ಆಕೆ ಗಲಾಟೆ ಮಾಡಿದ್ದಕ್ಕಾಗಿ ಹತ್ಯೆ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಈ ಸಂಬಂಧ ಆರೋಪಿಯ ಸಹಾಯಕರಾದ ವಿಶ್ವಾಸ್ ವಿಜಯ್ ಪವಾರ್ ಮತ್ತು ಸುಶಾಂತ್ ಶಾಂತಾರಾಮ್ ನರಲ್ಕರ್ ಎಂಬವರನ್ನು ಸಹ ಬಂಧಿಸಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ – ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿಗೆ ಗಂಭೀರ ಗಾಯ