– ಬಂಧನಕ್ಕೆ ತೆರಳಿದ ಪೊಲೀಸರ ಮುಂದೆ ಮರ್ಮಾಂಗಕ್ಕೆ ಕತ್ತರಿ!
ಬೆಂಗಳೂರು: ಕಾಮುಕನೊಬ್ಬ ಇನ್ಟಾಗ್ರಾಂನಲ್ಲಿ ಶಿಕ್ಷಕಿಯೊಂದಿಗೆ (Teacher) ಸ್ನೇಹ ಬೆಳಸಿ ಆಕೆಗೆ ಟಾರ್ಚ್‌ರ್ ನೀಡಿದ ಪ್ರಕರಣ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಶಿಕ್ಷಕಿಗೆ ಮೆಸೇಜ್ ಮಾಡಿದ್ದ ಯುವಕ, ನಾನು ನಿನ್ನ ಕ್ಲಾಸ್‌ಮೇಟ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನನಗೆ ಕ್ಯಾನ್ಸರ್ ಇದೆ, ನಿನ್ನ ಜೊತೆ ದೈಹಿಕ ಸಂಬಂಧ ಬೆಳೆಸಬೇಕು. ಇದು ನನ್ನ ಕೊನೆ ಆಸೆ ಎಂದಿದ್ದ.
ಕಾಮುಕನ ಆಸೆಗೆ ಶಿಕ್ಷಕಿ ಒಪ್ಪಿರಲಿಲ್ಲ. ಈ ವೇಳೆ ಯುವಕ ನಾನು ಕೆಲವೇ ದಿನ ಬದುಕಿರುತ್ತೇನೆ. ಬೆತ್ತಲೆ ವಿಡಿಯೋ ಆದ್ರೂ ಕಳಿಸು ಎಂದಿದ್ದ. ಇದಕ್ಕೆ ಒಪ್ಪಿದ್ದ ಶಿಕ್ಷಕಿ ಬೆತ್ತಲೆಯ ವಿಡಿಯೋ ಕಳಿಸಿದ್ದಳು. ಬಳಿಕ ಹಣ ಕೊಡು, ನೇರವಾಗಿ ಸಿಗು, ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದ. ಬಳಿಕ ಆತನಿಗೆ ಬರುವಂತೆ ಹೇಳಿ, ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಇದನ್ನೂ ಓದಿ: ಕೊಪ್ಪಳದಲ್ಲಿ ನಡೀತಾ ಲವ್ ಜಿಹಾದ್? – ಮುಸ್ಲಿಂ ಯುವಕನ ಫೋನಲ್ಲಿ ರಾಶಿ ರಾಶಿ ಫೋಟೋ, ವಿಡಿಯೋ ಪತ್ತೆ
ದೈಹಿಕ ಸಂಬಂಧದ ಆಸೆಗೆ ಬಿದ್ದು ಆಂದ್ರಪ್ರದೇಶದ ಪುಟ್ಟಪರ್ತಿಯಿಂದ ಯುವಕ ಬೆಂಗಳೂರಿಗೆ ಬಂದಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಅಂಗವಿಕಲನಿಂದ 95 ಲಕ್ಷ ಪಡೆದು ವಂಚಿಸಿದ ಐಎಎಸ್ ಅಧಿಕಾರಿ – ಹಣ ಕೇಳಿದ ವ್ಯಕ್ತಿಗೆ ಕೊಲೆ ಬೆದರಿಕೆ!

