ಮುಂಬೈ: ಕ್ರಿಕೆಟಿಗ ಕೆ.ಎಲ್.ರಾಹುಲ್ (K.L.Rahul) ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ (Sunil Shetty) ಮುಂಬೈ ಬಳಿಯ ಥಾಣೆ ಪಶ್ಚಿಮದಲ್ಲಿರುವ ಓವಾಲೆಯಲ್ಲಿ ಏಳು ಎಕರೆ ಭೂಮಿಯನ್ನು 9.85 ಕೋಟಿ ರೂ.ಗೆ ಖರೀದಿಸಿದ್ದಾರೆ.
ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಮಾವ ಮತ್ತು ಅಳಿಯ ಜೊತೆಯಾಗಿ 30 ಎಕರೆ 17 ಗುಂಟೆ ಭೂಮಿ ಖರೀದಿ ಮಾಡಿದ್ದಾರೆ. ಈ ವ್ಯವಹಾರಕ್ಕೆ 68.96 ಲಕ್ಷ ರೂ. ಮುದ್ರಾಂಕ ಶುಲ್ಕ ಮತ್ತು 30,000 ರೂ. ನೋಂದಣಿ ಶುಲ್ಕ ವಿಧಿಸಲಾಗಿದೆ. ಇದನ್ನೂ ಓದಿ: ಲಕ್ನೋ ಸೂಪರ್ ಜೈಂಟ್ಸ್‌ಗೆ ಬಿಗ್ ಬೂಸ್ಟ್ – ರಾಕೆಟ್ ವೇಗಿ ಮಯಾಂಕ್ ಯಾದವ್ ಕಂಬ್ಯಾಕ್
ಈ ವರ್ಷದ ಮಾರ್ಚ್ 20 ರಂದೇ ಭೂಮಿ ಖರೀದಿ ಸಂಬಂಧ ನೋಂದಾಯಿಸಲಾಗಿದೆ. ಥಾಣೆಯಿಂದ ಮುಂಬೈಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ಘೋಡ್‌ಬಂದರ್ ರಸ್ತೆಯ ಉದ್ದಕ್ಕೂ ಓವಾಲೆ ಥಾಣೆ ಪಶ್ಚಿಮದಲ್ಲಿದೆ ಎಂದು ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.
2024 ರ ಜುಲೈನಲ್ಲಿ ಕೆ.ಎಲ್.ರಾಹುಲ್ ಮತ್ತು ಅವರ ಪತ್ನಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅತಿಯಾ ಸುನೀಲ್ ಶೆಟ್ಟಿ, ಮುಂಬೈನ ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ 20 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದರು. ಇದನ್ನೂ ಓದಿ: ಬೌಲರ್‌ಗಳ ಆಟಕ್ಕೆ 20 ವಿಕೆಟ್ ಪತನ – ಪಂಜಾಬ್‌ಗೆ ರೋಚಕ 16 ರನ್‌ಗಳ ಜಯ