ನವದೆಹಲಿ: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ದಿನ ಬಂದಿದೆ. ವಿಶ್ವಕಪ್ (World Cup 2023) ಮಹಾಸಮರಕ್ಕೆ ಇಂದಿನಿಂದ (ಗುರುವಾರ) ಅಧಿಕೃತ ಚಾಲನೆ ಸಿಗಲಿದೆ. ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿವೆ. ಇಂದಿನಿಂದ ನವೆಂಬರ್ 19 ರ ವರೆಗೆ ವಿಶ್ವಕಪ್ ಕದನ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದ ಬಿಸಿಸಿಐ ಕೊನೆಗಳಿಗೆಯಲ್ಲಿ ಏಕಾಏಕಿ ಕೈಬಿಟ್ಟಿದೆ. ಸ್ಟಾರ್ ನಟರ ವೇದಿಕೆ ಕಾರ್ಯಕ್ರಮ, ಲೇಸರ್ ಲೈಟಿಂಗ್ ಮೂಲಕ ಅದ್ಧೂರಿ ಸಮಾರಂಭದ ಪ್ಲ್ಯಾನ್ ಮಾಡಿದ್ದ ಬಿಸಿಸಿಐ ಎಲ್ಲದಕ್ಕೂ ತಿಲಾಂಜಲಿ ಬಿಟ್ಟಿದೆ. ಇದಕ್ಕೆ ನಿರ್ದಿಷ್ಟ ಕಾರಣವನ್ನ ಬಿಸಿಸಿಐ ಈವರೆಗೆ ನೀಡಿಲ್ಲ. ಸರಳವಾಗಿಯೇ ಇಂದು ವಿಶ್ವಕಪ್ ಪಂದ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ
Advertisement
Advertisement
6 ಬಾರಿ ವಿಶ್ವಕಪ್ ಪ್ರತಿನಿಧಿಸಿರುವ ಭಾರತದ ಮಾಜಿ ಕ್ರಿಕೆಟರ್, ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ 2023ರ ವಿಶ್ವಕಪ್ ಟ್ರೋಫಿಯೊಂದಿಗೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ವೇಳೆ ಎಲ್ಲಾ 10 ತಂಡದ ನಾಯಕರು ಉಪಸ್ಥಿತರಿಲಿದ್ದಾರೆ. ಈ ಮೂಲಕ ವಿಶ್ವಕಪ್ ಸಮರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ಟೀಂ ನ್ಯೂಜಿಲೆಂಡ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
Advertisement
43 ವರ್ಷಗಳ ವಿಶ್ವಕಪ್ ದಾಹವನ್ನ ನೀಗಿಸಿಕೊಂಡಿರುವ ಕ್ರಿಕೆಟ್‌ನ ಜನಕ ಇಂಗ್ಲೆಂಡ್, ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಕಳೆದ ಬಾರಿ ವಿಶ್ವಕಪ್‌ಗೆ ಮುತ್ತಿಟ್ಟಿರುವ ಆಂಗ್ಲರು, ಈ ಬಾರಿಯೂ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ಳಲು ಹವಣಿಸುತ್ತಿದೆ. ಇತ್ತ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೆ ಕಳೆದ ಬಾರಿ ಪ್ರಶಸ್ತಿ ಸಮೀಪ ಹೋಗಿ ಮಿಸ್ ಮಾಡಿಕೊಂಡ ನ್ಯೂಜಿಲೆಂಡ್ ಈ ಬಾರಿ ಶತಾಯಗತಾಯ ಪ್ರಶಸ್ತಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಅಲ್ಲದೇ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ಗೆದ್ದು ಸೇಡು ತೀರಿಸಿಕೊಳ್ಳಲು ರಣತಂತ್ರ ಹೆಣೆದಿದೆ. ಹಾಗಾಗಿ ಎರಡು ಬಲಿಷ್ಠ ತಂಡಗಳ ಹೈವೋಲ್ಟೇಜ್ ಪಂದ್ಯಕ್ಕೆ ಎಲ್ಲರು ಕಾತರರಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಮಹಿ ನ್ಯೂ ಲುಕ್; ಯಾರಿದು ಹೀರೋ ಅಂತಿದ್ದಾರೆ ಫ್ಯಾನ್ಸ್
Advertisement
ಸಾಕಷ್ಟು ನಿರೀಕ್ಷೆಗಳು, ಪ್ರಶಸ್ತಿ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿರೋ ಟೀಂ ಇಂಡಿಯಾ, ಅಕ್ಟೋಬರ್ 8 ರಂದು ವಿಶ್ವಕಪ್‌ನ ಮೊದಲ ಪಂದ್ಯವನ್ನ ಆಸೀಸ್ ವಿರುದ್ಧ ಆಡಲಿದೆ. ಯುವ ಹಾಗೂ ಅನುಭವಿ ಆಟಗಾರರನ್ನೇ ಹೊಂದಿರುವ ಭಾರತ, ಎಲ್ಲಾ ವಿಭಾಗಗಳಲ್ಲೂ ಸಮರ್ಥ ಆಟಗಾರರನ್ನ ಹೊಂದಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್, ಶುಭಮನ್ ಗಿಲ್, ಪಾಂಡ್ಯ, ಜಡೇಜಾ, ಬೂಮ್ರಾ, ಸಿರಾಜ್, ಇಶಾನ್ ಕಿಶನ್, ಶಮಿ, ಅಶ್ವಿನ್, ಸೂರ್ಯಕುಮಾರ್ ಯಾದವ್ ಸೇರಿದಂತೆ 15 ಜನರ ತಂಡವನ್ನ ಅಳೆದುತೂಗಿ ಕಟ್ಟಲಾಗಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.
2013ರ ಬಳಿಕ ಭಾರತ ಒಂದೇ ಒಂದು ಐಸಿಸಿ ಟ್ರೋಫಿಯನ್ನ ಗೆದ್ದಿಲ್ಲ. ದಶಕಗಳ ಬಳಿಕ ಆ ಕೊರಗನ್ನ ನೀಗಿಸುವ ತವಕದಲ್ಲಿ ಟೀಂ ಇಂಡಿಯಾವಿದೆ. ರೋಹಿತ್ ಶರ್ಮಾ, ಕೊಹ್ಲಿ, ಅಶ್ವಿನ್‌ಗೆ ಇದೇ ಕೊನೆಯ ವಿಶ್ವಕಪ್ ಎನ್ನಲಾಗ್ತಿದ್ದು, ಅವರ ಆಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಿಶ್ವಕಪ್ ಹಬ್ಬದ ರಂಗು ಇಂದಿನಿAದ ಹೆಚ್ಚಾಗಲಿದೆ. ಕ್ರೀಡಾಭಿಮಾನಿಗಳಿಗಂತು ಬರೋಬ್ಬರಿ ಒಂದೂವರೆ ತಿಂಗಳು ರಸದೌತಣ ಸಿಗಲಿದೆ.
Web Stories