ಆಂಗ್ಲರ ವಿರುದ್ಧ ಆಸೀಸ್‌ಗೆ 33 ರನ್‌ ಜಯ; ಸೆಮಿ-ಫೈನಲ್‌ಗೆ ಇನ್ನೂ ಹತ್ತಿರ

Public TV
2 Min Read
Australia

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ (England vs Australia) 33 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಸೆಮಿ-ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದೆ.

Marnus Labuschagne

ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 286 ರನ್‌ಗಳಿಸಿ ಆಲೌಟ್‌ ಆಯಿತು. 287 ರನ್‌ ಗುರಿ ಬೆನ್ನತ್ತಿದ ಆಂಗ್ಲರು 48.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 253 ರನ್‌ ಅಷ್ಟೇ ಗಳಿಸಿತು. ಸತತ ಸೋಲುಗಳಿಂದ ಕಂಗೆಟ್ಟು ಸೆಮಿ ಹಾದಿಯಿಂದ ಹೊರಗಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಪಾಕ್‌ಗೆ ವರವಾದ ವರುಣ – ಕಿವೀಸ್‌ ವಿರುದ್ಧ 21 ರನ್‌ಗಳ ಜಯ; ಸೆಮೀಸ್‌ ಆಸೆ ಜೀವಂತ

Adam Zampa

ಆಸೀಸ್‌ ನೀಡಿದ 287 ರನ್‌ ಗುರಿ ಬೆನ್ನತ್ತಿದ ಆಂಗ್ಲರು ಗೆಲುವಿನ ಭರವಸೆಯೊಂದಿಗೆ ಕೊನೆ ವರೆಗೂ ಹೋರಾಡಿದರು. ತಂಡದ ಪರ ಡೇವಿಡ್ ಮಲನ್ (50), ಬೆನ್‌ ಸ್ಟೋಕ್ಸ್‌ (64) ಅರ್ಧಶತಕ ಬಾರಿಸಿ ಉತ್ತಮ ಪ್ರದರ್ಶನ ತೋರಿದರು. ಮೊಯಿನ್‌ ಅಲಿ (42), ಕ್ರಿಸ್ ವೋಕ್ಸ್ (32) ಆಟವೂ ತಂಡಕ್ಕೆ ಜಯದ ಭರವಸೆ ಮೂಡಿಸಿತ್ತು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗದೇ ಆಂಗ್ಲ ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದರು. ಜಾನಿ ಬೈರ್ಸ್ಟೋವ್ (0), ಜೋ ರೂಟ್ (13), ಜೋಸ್ ಬಟ್ಲರ್ (1), ಲಿಯಾಮ್ ಲಿವಿಂಗ್ಸ್ಟೋನ್ (2) ಕಳಪೆ ಪ್ರದರ್ಶನದಿಂದ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

Jos Buttler

ಆಸೀಸ್‌ ಪರ ಆಡಮ್ ಝಂಪಾ 3 ವಿಕೆಟ್‌ ಪಡೆದು ಗಮನ ಸೆಳೆದರು. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮ್ಮಿನ್ಸ್ ತಲಾ 2 ಹಾಗೂ ಮಾರ್ಕಸ್ ಸ್ಟೊಯಿನಿಸ್ ಒಂದು ವಿಕೆಟ್‌ ಪಡೆದು ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಪಾಕ್‌-ಕಿವೀಸ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ – ಅಭಿಮಾನಿಗಳಿಗೆ ನಿರಾಸೆ

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ತೋರಿತು. ಮಾರ್ನಸ್‌ ಲಾಬುಷೇನ್‌ 83 ಬಾಲ್‌ಗೆ 71 ರನ್‌ (7 ಫೋರ್‌) ಗಳಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ತಂಡದ ಪರ ಕ್ಯಾಮರೂನ್‌ ಗ್ರೀನ್‌ (47), ಸ್ಟೀವ್‌ ಸ್ಮಿತ್‌ (44), ಮಾರ್ಕಸ್‌ ಸ್ಟೊಯಿನಿಸ್‌ (35) ತಂಡದ ಪರ ರನ್‌ ಕಾಣಿಕೆ ನೀಡಿದರು.

ಆಂಗ್ಲರ ಪರ ಕ್ರಿಸ್‌ ವೋಕ್ಸ್‌ 4 ವಿಕೆಟ್‌ ಪಡೆದು ಮಿಂಚಿದರು. ಮಾರ್ಕ್‌ ವುಡ್‌ ಹಾಗೂ ಅದಿಲ್‌ ರಶೀದ್‌ ತಲಾ 2 ವಿಕೆಟ್‌ ಗಳಿಸಿದರು. ಆದರೆ ಬ್ಯಾಟಿಂಗ್‌ ವೈಫಲ್ಯದಿಂದ ತಂಡ ಸೋಲನುಭವಿಸಿತು.

Share This Article