ಸಿಡ್ನಿ: ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ಆಸ್ಟ್ರೇಲಿಯಾದ ಮ್ಯಾಗೆಲ್ಲಾನ್ ಫೈನಾನ್ಷಿಯಲ್ ಗ್ರೂಪ್ ಸಂಸ್ಥೆ ತನ್ನ ಪ್ರಯೋಜಕತ್ವವನ್ನು ಹಿಂಪಡೆದಿದೆ. ಇದು ಆಸೀಸ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವನ್ನು ಉಂಟು ಮಾಡಿದೆ.
ಮ್ಯಾಗೆಲ್ಲಾನ್ ಸಂಸ್ಥೆ ತನ್ನ ಪ್ರಯೋಜಕತ್ವನ್ನು ಹಿಂಪಡೆದ ಕಾರಣ ಆಸೀಸ್ ಮಂಡಳಿ ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಮಾಧ್ಯಮಗಳ ವರದಿ ಪ್ರಕಾರ ಮ್ಯಾಗೆಲ್ಲಾನ್ ಸಂಸ್ಥೆಯೊಂದಿಗೆ ಸುಮಾರು 17-20 ದಶಲಕ್ಷ ಆಸ್ಟ್ರೇಲಿಯಾನ್ ಡಾಲರ್(ಅಂದಾಜು 90 ಕೋಟಿ ರೂ.) ಮೊತ್ತದ ಒಪ್ಪಂದವಾಗಿತ್ತು. ಇದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರೀ ಮೊತ್ತದ ಪ್ರಯೋಜಕತ್ವವನ್ನು ಕಳೆದುಕೊಂಡಿದೆ. ಆದರೆ ಕೆಲ ಸಂಸ್ಥೆಗಳು ತಮ್ಮ ಪ್ರಯೋಜಕತ್ವವನ್ನು ಮುಂದುವರೆಸಿವೆ.
Advertisement
Advertisement
ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿರುವ ಮ್ಯಾಗೆಲ್ಲಾನ್ ಸಂಸ್ಥೆ, ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದ್ದ ಮೂರು ವರ್ಷಗಳ ಪ್ರಯೋಜಕತ್ವ ಒಪ್ಪಂದವನ್ನು ಅಂತ್ಯಗೊಳಿಸಲಾಗಿದೆ. ಈ ಹಿಂದೆ ಸಮಗ್ರತೆ, ನಾಯಕತ್ವ, ಸಮರ್ಪಣೆ ಸಂಸ್ಕೃತಿಯ ಮೌಲ್ಯಗಳ ಆಧಾರದ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ತನ್ನ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದೆ.
Advertisement
ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ನಲ್ಲಿ ಆಸೀಸ್ ಆಟಗಾರರು ಉದ್ದೇಶ ಪೂರಕವಾಗಿ ನಿಯಮಗಳನ್ನು ಮುರಿದಿರುವ ಕಾರಣ ಇದು ಒಂದು ಪಿತೂರಿಯಾಗಿದ್ದು, ಆಟದ ಸಮಗ್ರತೆಯ ಮನೋಭವಕ್ಕೆ ಧಕ್ಕೆಯಾಗಿದೆ ಎಂದು ಮ್ಯಾಗೆಲ್ಲಾನ್ ಸಿಇಒ ಹ್ಯಾಮಿಶ್ ಡೌಗ್ಲಾಸ್ ಹೇಳಿದ್ದಾರೆ.
Advertisement
ಆಸೀಸ್ ಕ್ರಿಕೆಟ್ ಮಂಡಳಿ ಬುಧವಾರ ಚೆಂಡು ವಿರೂಪಗೊಳಿದ ಪ್ರಮುಖ ಆಟಗಾರರಾದ ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷದ ಕಾಲ ನಿಷೇಧ ವಿಧಿಸಿ ಕಠಿಣ ಸಂದೇಶ ರವಾಸಿತ್ತು. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಬಿಸಿಸಿಐ ಕೂಡ ಐಪಿಎಲ್ ನಲ್ಲಿ ಒಂದು ವರ್ಷ ಭಾಗವಹಿಸಿಲು ನಿಷೇಧ ವಿಧಿಸಿದೆ. ಇನ್ನು ಚೆಂಡು ವಿರೂಪಗೊಳಿಸಿದ್ದ ಬ್ಯಾನ್ ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಒಳಗಾಗಿದ್ದಾರೆ. ಸದ್ಯ ಮೂವರು ಆಟಗಾರರು ವಿಚಾರಣೆಗೊಳಪಟ್ಟ ಬಳಿಕ ಆಸ್ಟ್ರೇಲಿಯಾಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!
ಆಸೀಸ್ ಆಟಗಾರ ವಾರ್ನರ್ ಹಾಗೂ ಬ್ಯಾನ್ ಕ್ರಾಫ್ಟ್ ರೊಂದಿಗೆ ಉಡುಪು ತಯಾರಿಕ ಸಂಸ್ಥೆ ಎಎಸ್‍ಐಸಿಎಸ್ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ತಿಳಿಸಿದೆ. ಮತ್ತೊಂದೆಡೆ ಎಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆ ವಾರ್ನರ್ ರೊಂದಿನ ಒಪ್ಪಂದವನ್ನು ಅಂತ್ಯಗೊಳಿಸಿದೆ.