ಚೆನ್ನೈ: ತಮಿಳುನಾಡಿನಲ್ಲಿ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದು, ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತಿದೆ.
Advertisement
ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಳಿಕ ಕಾಮ್‍ರಾಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದ್ದು, ದೆಹಲಿ ಕಂಟೋನ್‍ಮೆಂಟ್‍ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿರುವ ಪಾರ್ಥಿವ ಶರೀರರವಿದೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?
Advertisement
Advertisement
ನಡೆದಿದ್ದೇನು..?
ತಮಿಳುನಾಡಿನ ವೆಲ್ಲಿಂಗ್ಟನ್‍ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಬುಧವಾರ ಬಿಪಿನ್ ರಾವತ್ ಉಪನ್ಯಾಸ ನೀಡಬೇಕಿತ್ತು. ಹೀಗಾಗಿ ದೆಹಲಿಯಿಂದ ಬೆಳಗ್ಗೆ 9ಕ್ಕೆ ಸೇನಾ ವಿಮಾನದಲ್ಲಿ ಸೂಳೂರಿನತ್ತ 9 ಮಂದಿ ಪ್ರಯಾಣ ಬೆಳೆಸಿದ್ದರು. ಬೆಳಗ್ಗೆ 11:35ಕ್ಕೆ ಸೂಳೂರಿಗೆ ಬಿಪಿನ್ ರಾವತ್ ಅವರಿದ್ದ ಸೇನಾ ವಿಮಾನ ಲ್ಯಾಂಡ್ ಆಗಿದೆ. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12:22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು
Advertisement
ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಹೆಲಿಕಾಪ್ಟರ್ ಪತನಗೊಂಡಿದೆ. ಈ ವೇಳೆ ಭಾರೀ ಬೆಂಕಿ, ದಟ್ಟ ಹೊಗೆ ಕಾಣಿಸಿದೆ. ಮರಗಳ ಮೇಲೆ ಕಾಪ್ಟರ್ ಪತನ ಆಗುವಾಗ ಬೆಂಕಿಯುಂಡೆಯಂತೆ ನಾಲ್ವರು ಹೊರಗೆ ಜಿಗಿದಿದ್ದಾರೆ. 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ