ಧಾರವಾಡ: ವಿದ್ಯಾಕಾಶಿ ಧಾರವಾಡ (Dharwad) ಹೊರವಲಯದ ಚಿಕ್ಕಮಲ್ಲಿಗವಾಡ ಗ್ರಾಮದ ಬಳಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕ್ಯಾಂಪಸ್ ಇದೇ ಮಾರ್ಚ್ 12ಕ್ಕೆ ಉದ್ಘಾಟನೆ ಆಗಲಿದೆ. ಈ ಉದ್ಘಾಟನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಆಗಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಾಯಕರ ನಡುವೆ ಇದೀಗ ಕ್ರೆಡಿಟ್ ವಾರ್ (Credit War) ಆರಂಭವಾಗಿದೆ.
Advertisement
ಕಾಂಗ್ರೆಸ್ ನಾಯಕರ ಪ್ರಕಾರ ಈ ಐಐಟಿಗೆ ಧಾರವಾಡದಲ್ಲಿ ಜಾಗ ಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ. ಬಿಜೆಪಿಯ ಜಗದೀಶ್ ಶೆಟ್ಟರ್ ಸಿಎಂ ಇದ್ದಾಗ ಇದೇ ಐಐಟಿ ರಾಯಚೂರಿಗೆ ಕೊಡಬೇಕು ಎಂದು ಬರೆದಿದ್ದರು. ಆದರೆ ಸಿದ್ದರಾಮಯ್ಯ ಸಿಎಂ ಆದ ಮೇಲೆ ಅದನ್ನು ಧಾರವಾಡಕ್ಕೆ ತಂದಿದ್ದಷ್ಟೇ ಅಲ್ಲಾ, ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಇದನ್ನು ಮಾಡಲು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹಾಗೂ ಆಗಿನ ಕೈಗಾರಿಕಾ ಸಚಿವ ಆರ್‌ವಿ ದೇಶಪಾಂಡೆ ಎಂದು ವಾದಿಸಿದ್ದಾರೆ.
Advertisement
Advertisement
ಇದೇ ಸಮಯದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಕೂಡಾ ಕಾರಣ ಎಂದು ಕಾಂಗ್ರೆಸ್ ನಾಯಕ ದೀಪಕ್ ಚಿಂಚೋರೆ ಹೇಳಿದ್ದಾರೆ. ಅಲ್ಲದೇ ಈ ಕ್ರೆಡಿಟ್ ಪಡೆಯಲು ಸ್ಥಳೀಯ ಬಿಜೆಪಿ ಶಾಸಕರು ಹಾಗೂ ಸಂಸದರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು
Advertisement
ಇದಕ್ಕೆ ಬಿಜೆಪಿ ಉತ್ತರ ನೀಡಿದ್ದು, ಐಐಟಿ ಧಾರವಾಡಕ್ಕೆ ತಪ್ಪಿಸಲು ಇದೇ ಸಿದ್ದರಾಮಯ್ಯ ಸಿಎಂ ಇದ್ದಾಗ ಪ್ರಯತ್ನ ಮಾಡಿದ್ದರು. ಮೋದಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಐಐಟಿ ಕೊಟ್ಟಾಗ 3 ಜಿಲ್ಲೆಗಳನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ಮೈಸೂರು, ಧಾರವಾಡ ಹಾಗೂ ರಾಯಚೂರು ಎಂದಿತ್ತು. ಕೇಂದ್ರದ ಐಐಟಿ ತಂಡ ಬಂದಾಗ ಮೈಸೂರಿನಲ್ಲಿ 2 ದಿನ ಆ ತಂಡಕ್ಕೆ ಇಟ್ಟುಕೊಂಡಿದ್ದ ಸಿದ್ದರಾಮಯ್ಯ ಸರ್ಕಾರ ಹೇಗಾದ್ರೂ ಮಾಡಿ ಧಾರವಾಡಕ್ಕೆ ಐಐಟಿ ತಪ್ಪಿಸಲು ನೋಡಿತ್ತು ಎಂದು ಧಾರವಾಡ ಶಾಸಕ ಅರವಿಂದ್ ಬೆಲ್ಲದ ಆರೋಪ ಮಾಡಿದ್ದಾರೆ.
ನಾವು ಕೇಂದ್ರದ ತಂಡಕ್ಕೆ ಇಲ್ಲಿಯ ಸೂಕ್ತ ಜಾಗ ಹಾಗೂ ಇಲ್ಲಿಯ ಅನುಕೂಲತೆ ತಿಳಿಸಿದಾಗ ಇಲ್ಲಿಗೆ ಮೋದಿ ಸರ್ಕಾರ ಐಐಟಿ ಕೊಟ್ಟಿದ್ದು, ಇದರ ಕ್ರೆಡಿಟ್ ಏನಿದ್ರು ಬಿಜೆಪಿಗೆ ಸಲ್ಲಬೇಕು. ಅಲ್ಲದೇ ಇದಕ್ಕಾಗಿ ನಾವು ಹೋರಾಟ ಮಾಡಿದ್ದೇವೆ, ನಮಗೆ ಇದರ ಕ್ರೆಡಿಟ್ ಸಿಗಬೇಕು ಎಂದು ಬೆಲ್ಲದ ಹೇಳಿದ್ದಾರೆ. ಇದನ್ನೂ ಓದಿ: ನನಗೆ ರಾಜಕೀಯ ಅನಿವಾರ್ಯ ಅಲ್ಲ ಆಕಸ್ಮಿಕ: ಸುಮಲತಾ