ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (T.D.Rajegowda) ಕುಕ್ಕರ್ ಹಂಚಿ ಮಾಡಿ ಮತದಾರರಿಂದ ವ್ಯಂಗ್ಯಕ್ಕೊಳಗಾಗಿದ್ದಾರೆ.
ಎರಡು ದಿನದಿಂದ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಂಚಿದ ಕುಕ್ಕರ್ (Cooker) ಬಾಕ್ಸ್ ಮೇಲೆ 450 ರೂ. ಎಂದು ಅಚ್ಚಾಗಿದೆ. ಅದರ ಮೇಲೆ 1399 ರೂ. ಲೇಬಲ್ ಅಂಟಿಸಿ ಕಾರ್ಯಕರ್ತರು ಮತದಾರರಿಗೆ ಹಂಚಿದ್ದಾರೆ. ಆನ್‍ಲೈನ್‍ನಲ್ಲಿಯೂ ಕುಕ್ಕರ್ ಬೆಲೆ 450 ರೂ. ಎಂದಿದೆ. ಇದು ಜನರಿಗೆ ತಿಳಿಯುತ್ತಿದ್ದಂತೆ ಶಾಸಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ- ಹೊತ್ತಿ ಉರಿದ ಪ್ಲಾಸ್ಟಿಕ್ ಗೊಡಾನ್
Advertisement
Advertisement
ಕುಕ್ಕರ್ ಅಲುಗಾಡಿಸಿದರೆ ಶಬ್ದ ಬರುತ್ತಿದೆ. ಯಾರೂ ಕೇಳದಿದ್ದರೂ ಕೊಟ್ಟಿದ್ದಾರೆ. ಕೊಟ್ಟ ಮೇಲೆ ಒಳ್ಳೆಯದಾದರೂ ಕೊಡಬೇಕು. ಇಲ್ಲ ಸುಮ್ಮನಿರಬೇಕು ಎಂದು ಮತದಾರರು ಕಾಂಗ್ರೆಸ್ (Congress) ವಿರುದ್ಧ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ- ಸಾಮಾಜಿಕ ಬಹಿಷ್ಕಾರ ಪ್ರಕರಣ: 12 ಜನರ ಬಂಧನ