ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಬೆಂಬಲಿಗರು ಹಾಗೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಗರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ರೆಡಿಟ್ ವಿಚಾರವಾಗಿ ವಾಗ್ವಾದ ಶುರುವಾಗಿದೆ.
ಕೇಂದ್ರ ಚುನಾವಣಾ ಆಯೋಗದ (ECI) ವಿರುದ್ಧ ಹಾಗೂ ಅದರ ವಿವಾದಿತ ʻಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR)ʼ ಪ್ರಕ್ರಿಯೆ ವಿರುದ್ಧ ನಡೆಯುತ್ತಿರುವ ಹೋರಾಟದ ಕ್ರೆಡಿಟ್ ಯಾರಿಗೆ ಸೇರಬೇಕು? ಎಂಬುದು ಈಗ ಎರಡೂ ಬಣಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
An entire “self-declared liberal” ecosystem has been activated to denounce @abhijeet_dipke and the fact that he has been able to capture the imagination of millions of Indians after a LONG LONG time.
The hilarious part is that this ecosystem exists only on Twitter, but somehow…
— Ashutosh Ranka (@AshutoshRanka) October 3, 2026
ಹೌದು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಎರಡೂ ಕಡೆಯವರು ‘ವೋಟ್ ಚೋರಿ’ ಆರೋಪದ ಹಿನ್ನೆಲೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆದರೆ ಚುನಾವಣಾ ಆಯೋಗದ ವಿರುದ್ಧದ ಹೋರಾಟಕ್ಕೆ ಜನಬೆಂಬಲ ಸೃಷ್ಟಿಸುವಲ್ಲಿ ನಿಜವಾದ ಪಾತ್ರ ಯಾರದ್ದು? ಎಂಬ ವಿಚಾರವೇ ಈಗ ಚರ್ಚೆಯ ಕದನವಾಗಿ ಮಾರ್ಪಟ್ಟಿದೆ.
ಕಾಂಗ್ರೆಸ್ ವಿರುದ್ಧ ಸಿಜೆಪಿ ನೇರ ವಾಗ್ದಾಳಿ
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹಾಗೂ ಅವರ ಬೆಂಬಲಿಗರು ಗಾಂಧಿ ಜಯಂತಿಯಂದು (ಅ.2) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಾವಿರಾರು ಯುವ ಪ್ರತಿಭಟನಾಕಾರರನ್ನ ಒಗ್ಗೂಡಿಸಿದ ನಂತರ ಎರಡೂ ಗುಂಪುಗಳ ನಡುವೆ ಸೋಷಿಯಲ್ ಮೀಡಿಯಾ ಸಂಘರ್ಷ ತೀವ್ರಗೊಂಡಿದೆ. ಸಿಜೆಪಿ ಬೆಂಬಲ ಹಾಗೂ ಸ್ವಯಂ ಪ್ರೇರಿತ ಹೋರಾಟವನ್ನು ಉಲ್ಲೇಖಿಸಿ, ಪಕ್ಷದ ಸಹ ಸಂಸ್ಥಾಪಕ ಆಶುತೋಷ್ ರಂಕಾ ಕಾಂಗ್ರೆಸ್ ಬೆಂಬಲಿಗರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
Cockroaches can roam free in Mumbai, but when NSUI & IYC hit the streets they are detained!!
No media coverage on congress & full media coverage on cockroaches..What is the reason? Whose plan is being implemented?
— Vijay Thottathil (@vijaythottathil) October 2, 2026
ರಂಕಾ ಎಕ್ಸ್ ಪೋಸ್ಟ್‌ಗೆ ಜಿರಳೆ ಪಾರ್ಟಿ ಕಾರ್ಯಕರ್ತರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ತಮ್ಮ ಪ್ರತಿಭಟನೆಗಳನ್ನ ಪತ್ರಿಕಾಗೋಷ್ಠಿ ಹಾಗೂ ನ್ಯಾಯಾಲಯದ ಅರ್ಜಿಗಳಿಗೆ ಸೀಮಿತಗೊಳಿಸಿದ್ದವು. ಆದ್ರೆ ಸಿಜೆಪಿ ಬೀದಿಗಳಿದು ಪ್ರತಿಭಟನೆ ಹಾಗೂ ನಾಗರಿಕರನ್ನು ಎಚ್ಚರಿಸಿದ ಬಳಿಕವೇ SIR ವಿವಾದವು ರಾಷ್ಟ್ರೀಯ ಮಟ್ಟದ ಯುವಜನರ ಹೋರಾಟವಾಗಿ ರೂಪುಗೊಂಡಿತು ಎಂದು ಸಿಜೆಪಿ ಬೆಂಬಲಿಗರು ವಾದಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿಗರ ತಿರುಗೇಟು
ಇನ್ನೂ ಸಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆಂಬಲಿಗರು ನೇರವಾಗಿ ತಿರುಗೇಟು ನೀಡಿದ್ದಾರೆ. ಸಿಜೆಪಿಗೆ ಸಿಗುತ್ತಿರುವ ಮಾಧ್ಯಮ ಪ್ರಚಾರವನ್ನ ಪ್ರಶ್ನಿಸಿದ ಅವರು, ಸಂಸ್ಥೆಗಳ ವಿರುದ್ಧ ನಡೆಯುತ್ತಿದ್ದ ರಾಜಕೀಯ ಹೋರಾಟದಿಂದ ಗಮನ ಬೇರೆಡೆ ಸೆಳೆಯಲು ಸಿಜೆಪಿ ಒಂದು ‘ಡಿಸ್ಟ್ರಕ್ಷನ್’ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇನ್ನೂ ಕಾಂಗ್ರೆಸ್ ವಕ್ತಾರ ರೀತಮ್ ಸಿಂಗ್, ರಂಕಾ ಪೋಸ್ಟ್‌ಗೆ ಎಕ್ಸ್‌ನಲ್ಲೇ ತಿರುಗೇಟು ನೀಡಿದ್ದಾರೆ. ʻಆಶುತೋಷ್, ಇಷ್ಟು ದಿನ ನಾನು ತಡೆದುಕೊಂಡಿದ್ದೆ. ಇನ್ಮುಂದೆ ನಿಮ್ಮ ಸಂಚು ಮತ್ತು ಸುಳ್ಳು ಪ್ರತಿಷ್ಠೆಯ ಮನೋಭಾವವನ್ನ ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
Ashutosh, till now I had restrained myself but let me unveil your conspiracy and sense of false pride.
When you were detained by Assam Police. We, Congress people helped to get CJP people out. Yet you categorically refused to have even a courtesy meeting with our Congress… https://t.co/cfYMgUcxuo
— Reetam Singh (@SinghReetam) October 3, 2026
ರೀತಮ್ ಸಿಂಗ್ ಎಕ್ಸ್‌ನಲ್ಲಿ ಏನಿದೆ?
ʻನಿಮ್ಮನ್ನು ಅಸ್ಸಾಂ ಪೊಲೀಸರು ಬಂಧಿಸಿದಾಗ, ನಾವು ಕಾಂಗ್ರೆಸ್‌ನವರು CJPಯ ಜನರನ್ನು ಹೊರಗೆ ಕರೆತರಲು ಸಹಾಯ ಮಾಡಿದ್ದೇವೆ. ಆದರೂ ನೀವು ನಮ್ಮ ಕಾಂಗ್ರೆಸ್ ನಾಯಕರನ್ನ ಹಾಗೂ ಗೌರವ್ ಸರ್ ಅವರನ್ನ ಭೇಟಿಯಾಗಿ ಕನಿಷ್ಠ ಸೌಜನ್ಯದ ಮಾತುಕತೆ ನಡೆಸಲೂ ಸ್ಪಷ್ಟವಾಗಿ ನಿರಾಕರಿಸಿದ್ದೀರಿ. ನೀವು ಹಾಗೆ ನಿರಾಕರಿಸಿದ್ದು ಆಮ್ ಆದ್ಮಿ ಪಕ್ಷವು ನಿಮ್ಮನ್ನು ಕಾಂಗ್ರೆಸ್‌ನವರನ್ನ ಭೇಟಿಯಾಗಬಾರದೆಂದು ಹೇಳಿದ್ದರಿಂದ. ಗುವಾಹಟಿಯಲ್ಲಿ ನಿಮ್ಮ ಆತಿಥೇಯರಾಗಿದ್ದ ಕುನ್ಕಿ ಚೌಧರಿ ಅವರು ನಾಗಾಂವ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ AJP ಅಧ್ಯಕ್ಷ ಲುರಿನ್ ಗೊಗೋಯಿ ದಾ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿದ್ದರು. ಅವರೂ ಸಹ ನಿಮ್ಮನ್ನು ಕಾಂಗ್ರೆಸ್‌ನವರನ್ನ ಭೇಟಿಯಾಗಿ ಚರ್ಚಿಸುವಂತೆ ಕೇಳಿಕೊಂಡಿದ್ದರು. ಆದರೂ ನೀವು ಒಮ್ಮೆಯೂ ಕಾಂಗ್ರೆಸ್ ಅಥವಾ ನಮ್ಮ ವಿದ್ಯಾರ್ಥಿ ಘಟಕದೊಂದಿಗೆ ಸಂಪರ್ಕ ಸಾಧಿಸಲು ಆಯ್ಕೆ ಮಾಡಲಿಲ್ಲ.
ನೀವು ನಮ್ಮನ್ನು ಇದರಿಂದ ದೂರವಿರಲು ಹೇಳಿದ್ದೀರಿ. ಇದು ಆಮ್ ಆದ್ಮಿ ಪಕ್ಷದ ಉಪಕ್ರಮ ಎಂದು ಹೇಳಿದ್ದೀರಿ. ಹೀಗಾಗಿ ದಯವಿಟ್ಟು ನಿಮ್ಮ ಈ ಸುಳ್ಳು ನಾಟಕ ನಿಲ್ಲಿಸಿ. ಜಂತರ್ ಮಂತರ್ 1.0 ಪ್ರತಿಭಟನೆಯಲ್ಲಿ ನೀವು ನೇಹಾ ಬೋರಾ ಅವರನ್ನ ಹೇಗೆ ಬದಿಗೆ ಸರಿಸಿದ್ದೀರಿ ಎಂಬುದು ನಮಗೆ ಗೊತ್ತಿದೆ. ಎಡಪಕ್ಷಗಳೇ ನಮ್ಮ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂಪರ್ಕ ಸಾಧಿಸಲು ಮುಂದಾದಾಗಲೂ, ಅರವಿಂದ್ ಕೇಜ್ರಿವಾಲ್ ಅವರ ನೇರ ಸೂಚನೆಯ ಮೇರೆಗೆ ನೀವು ಅವರೊಂದಿಗೆ ಸಂಪರ್ಕ ಸಾಧಿಸದಿರಲು ನಿರ್ಧರಿಸಿದ್ದೀರಿ. ವಿದ್ಯಾರ್ಥಿಗಳ ಸಮಸ್ಯೆಗಳಿಗಾಗಿ ನಿಲ್ಲುವುದು ಒಂದು ವಿಷಯ. ಆದರೆ ಒಂದು ಚಳವಳಿಯನ್ನ ಹೈಜಾಕ್ ಮಾಡುವುದು ಮತ್ತೊಂದು ವಿಷಯ. ಇತರರ ಸಮಸ್ಯೆಗಳ ಮೇಲೆ ‘piggy riding’ (ಹಂದಿಯ ಸವಾರಿ) ಮಾಡಿ, ಅವುಗಳನ್ನು ಹೈಜಾಕ್ ಮಾಡುವುದಕ್ಕೆ ಆಮ್ ಆದ್ಮಿ ಪಕ್ಷ ಹೆಸರುವಾಸಿಯಾಗಿದೆ.
ನಾನು ನಿಮಗೆ ನೆನಪಿಸಬೇಕೆಂದಿರುವುದು ಏನಂದ್ರೆ, ಸಿಜೆಪಿ ಜನರ ಚಳವಳಿ. ಅದು ಆಮ್ ಆದ್ಮಿ ಪಕ್ಷದ ಬೌದ್ಧಿಕ ಸ್ವತ್ತು ಅಲ್ಲ. ಸಿಜೆಐ ಒಂದು ಹೇಳಿಕೆ ನೀಡಿದರು. ದೀಪ್ಕೆ ಒಂದು ಹಾಸ್ಯ ಮಾಡಿದರು. ವಿದ್ಯಾರ್ಥಿಗಳು ಅದಕ್ಕೆ ಸ್ಪಂದಿಸಿದರು. ನಾವೆಲ್ಲರೂ ಪ್ರತಿಭಟನೆಗೆ ಇಳಿದೆವು. CJP ದೀಪ್ಕೆ ಅವರ ವೈಯಕ್ತಿಕ ಆಸ್ತಿ ಅಲ್ಲ, ನಿಮ್ಮ ವೈಯಕ್ತಿಕ ಆಸ್ತಿಯೂ ಅಲ್ಲ. ಹಾಗೆಯೇ ಅದು ಆಮ್ ಆದ್ಮಿ ಪಕ್ಷದ ಪ್ರಚಾರ ಅಥವಾ ವಿಸ್ತರಣೆಯ ವೇದಿಕೆಯೂ ಅಲ್ಲ. CJPಗೆ ಯಾರೊಬ್ಬರ ಮಾಲೀಕತ್ವ ಅಥವಾ ಸ್ವಾಮ್ಯ ಹಕ್ಕಿಲ್ಲ. ನಾವು ಇದನ್ನು ಸೌಜನ್ಯಯುತವಾಗಿ ಹಾಗೂ ವಿಷಯಾಧಾರಿತವಾಗಿ ಮುಂದುವರಿಸೋಣ. ಈ ಉದ್ದೇಶವು ಒಂದು ರಾಜಕೀಯ ಪಕ್ಷಕ್ಕಿಂತ ದೊಡ್ಡದು. ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೊಮ್ಮೆ ರಾಜಕೀಯವಾಗಿ ಮುನ್ನೆಲೆಗೆ ತರಲು CJPಯನ್ನು ಬಳಸುವುದನ್ನು ನಿಲ್ಲಿಸಿ. ಇದನ್ನೆಲ್ಲ ನಿಮ್ಮ ವೈಯಕ್ತಿಕ ವಿಚಾರವನ್ನಾಗಿ ಮಾಡುವುದನ್ನೂ ನಿಲ್ಲಿಸಿ. CJP ಒಂದು ವಿಕೇಂದ್ರೀಕೃತ ಚಳವಳಿ. ಇಲ್ಲಿ ಯಾವುದೇ ಒಬ್ಬ ಸರ್ವೋಚ್ಚ ನಾಯಕ ಅಥವಾ ಅವರ ಅಧೀನದ ಶ್ರೇಣಿವ್ಯವಸ್ಥೆ ಇಲ್ಲ. ನಾವೆಲ್ಲರೂ ಸಮಾನರು. ಅದಕ್ಕಾಗಿಯೇ ಜನರು ಇದನ್ನು ಬೆಂಬಲಿಸುತ್ತಾರೆ. ನೀವು ಇದರ ಮೇಲೆ ನಿಮ್ಮ ಮಾಲೀಕತ್ವ ಹೇರಲು ಪ್ರಯತ್ನಿಸಿ ನೋಡಿ. ಆಗ ‘ಬರ್ಗರ್ ಕಿಂಗ್ ವಿಜಯತಾ ದಹಿಯಾ’ ಅವರಿಗೆ ಏನಾಯಿತೋ, ಅದೇ ರೀತಿಯ ಪರಿಣಾಮವನ್ನು ಆ ಜನರಿಗೂ ಎದುರಾಗುವುದನ್ನು ನೋಡಿ ಎಂದು ಕುಟುಕಿದ್ದಾರೆ.
ಇದಕ್ಕೆ ಮತ್ತೊರ್ವ ಕಾಂಗ್ರೆಸ್ ಕಾರ್ಯಕರ್ತ ವಿಜಯ್ ತೊಟ್ಟತ್ತಿಲ್ ಕೂಡ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದು, ಶುಕ್ರವಾರದ ಪ್ರತಿಭಟನೆ ವೇಳೆ ಎರಡೂ ಗುಂಪುಗಳ ವಿರುದ್ಧ ಪೊಲೀಸರು ಹಾಗೂ ಮುಖ್ಯವಾಹಿನಿ ಮಾಧ್ಯಮಗಳು ತೋರಿದ ವರ್ತನೆಯಲ್ಲಿ ವ್ಯತ್ಯಾಸವಿದೆ ಎಂದು ಟೀಕಿಸಿದ್ದಾರೆ. ʻಕೈʼ ಕಾರ್ಯಕರ್ತರು ಹೇಳುವಂತೆ, ರಾಹುಲ್ ಗಾಂಧಿ ಹಾಗೂ ಇಂಡಿ ಒಕ್ಕೂಟ ಬಹಳ ಹಿಂದಿನಿಂದಲೇ ಚುನಾವಣಾ ಪಟ್ಟಿಯಲ್ಲಿನ ಸಂಗತಿಗಳು ಮತ್ತು ‘ವೋಟ್ ಚೋರಿ’ ವಿಚಾರ ಪ್ರಸ್ತಾಪಿಸುತ್ತಾ ಬಂದಿದೆ. CJP ಇತ್ತೀಚೆಗೆ ಪಡೆದುಕೊಂಡ ಜನಪ್ರಿಯತೆ ಬಳಸಿಕೊಂಡು ಕಾಂಗ್ರೆಸ್ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಹೋರಾಟದ ಕೀರ್ತಿಯನ್ನ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕುಟುಕಿದ್ದಾರೆ.
ಸೌರವ್ ದಾಸ್ ಹೇಳಿದ್ದೇನು?
ʻಕೈʼ ಕಾರ್ಯಕರ್ತರ ಹೇಳಿಕೆಗೆ ತಿರುಗೇಟು ನೀಡಿರುವ ಸಿಜೆಪಿ ಸಹ ಸಂಸ್ಥಾಪಕ ಸೌರವ್ ದಾಸ್, ʻಪ್ರಪಂಚ ನಿಮ್ಮ ಪಕ್ಷದ ಸುತ್ತಲೇ ಸುತ್ತುವುದಿಲ್ಲ. ಆ ವಿಷಯ ಮರೆತು ಮುಂದೆ ಸಾಗಿʼ ಎಂದು ವ್ಯಂಗ್ಯವಾಡಿದ್ದಾರೆ.
ಕ್ರೆಡಿಟ್ ವಾರ್ ಜಗಳದ ಮುಖ್ಯಾಂಶಗಳೇನು?
* ಮೀಡಿಯಾ ಕವರೇಜ್ vs ತಳಮಟ್ಟದ ಹೋರಾಟ
ಮುಖ್ಯವಾಹಿನಿ ಮಾಧ್ಯಮಗಳು CJP ಪ್ರತಿಭಟನೆಗಳಿಗೆ ಹೆಚ್ಚು ಪ್ರಚಾರ ನೀಡುವ ಮೂಲಕ ಸಂಸತ್ತು ಹಾಗೂ ರಾಜಕೀಯ ವೇದಿಕೆಗಳಲ್ಲಿ ನಡೆಯುತ್ತಿರುವ ಪ್ರತಿಪಕ್ಷದ ಹೋರಾಟವನ್ನ ಕಡೆಗಣಿಸುತ್ತಿವೆ ಎಂದು ಕಾಂಗ್ರೆಸ್ ಬೆಂಬಲಿಗರು ಆರೋಪಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಡಿಜಿಟಲ್ ವೇದಿಕೆ ಮೂಲಕ ಯುವಜನರನ್ನ ಸೆಳೆಯುವ ಪ್ರಯತ್ನಕ್ಕೆ ಸಿಜೆಪಿ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿಭಟನೆಯ ತಂತ್ರ
ಸಿಜೆಪಿ ನೇರ ಗಡುವು, ಒತ್ತಡ ಹಾಗೂ ಪಕ್ಷಾತೀತ ನಾಗರಿಕ ಅಸಹಕಾರಕ್ಕೆ ಒತ್ತು ನೀಡುತ್ತಿದೆ. ಕಾಂಗ್ರೆಸ್ ಮಾತ್ರ ಸಂಘಟಿತ ರಾಜಕೀಯ ರ‍್ಯಾಲಿಗಳು, ಕಾನೂನು ಹೋರಾಟಗಳು ಹಾಗೂ ಸಂಸತ್ತಿನ ಮೂಲಕ ಒತ್ತಡ ಹೇರುವ ಕ್ರಮಗಳು ಸಂಸ್ಥಾತ್ಮಕ ಬದಲಾವಣೆಗೆ ಅಗತ್ಯ ಎಂದು ಪ್ರತಿಪಾದಿಸುತ್ತಿದೆ.
‘ವೋಟ್ ಚೋರಿ’ ಹೋರಾಟದ ಕ್ರೆಡಿಟ್ ಯಾರಿಗೆ?
ಚುನಾವಣಾ ಪಟ್ಟಿಗಳ ಕುರಿತು ಹಾಗೂ ಮಹಾರಾಷ್ಟ್ರದ ವಿದರ್ಭ ಸೇರಿದಂತೆ ಹಲವು ವಿಚಾರಗಳಲ್ಲಿ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯನ್ನ ಕಾಂಗ್ರೆಸ್ ಉಲ್ಲೇಖಿಸುತ್ತಿದೆ. ಮತ್ತೊಂದೆಡೆ, ದಿಪ್ಕೆ ನೇತೃತ್ವದ ಗುಂಪು ಬೀದಿಗಿಳಿಯುವವರೆಗೂ ಆ ಪ್ರಯತ್ನಗಳು ದೊಡ್ಡ ಮಟ್ಟದ ಜನಾಂದೋಲನವಾಗಿ ರೂಪುಗೊಂಡಿರಲಿಲ್ಲ ಎಂಬುದು ಸಿಜೆಪಿ ಬೆಂಬಲಿಗರ ವಾದವಾಗಿದೆ.
ದೆಹಲಿ ಹಾಗೂ ವಿವಿಧ ರಾಜ್ಯ ರಾಜಧಾನಿಗಳಲ್ಲಿ ಅಕ್ಟೋಬರ್ ತಿಂಗಳಾದ್ಯಂತ ಮತ್ತಷ್ಟು ಪ್ರತಿಭಟನೆಗಳನ್ನ ನಡೆಸಲು ಎರಡೂ ಕಡೆಯವರು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಮಧ್ಯದಲ್ಲೇ ‘ಕ್ರೆಡಿಟ್ ಚೋರಿ’ ಕದನ ಸದ್ದು ಮಾಡುತ್ತಿದ್ದು, ಇದು ಹೋರಾಟದ ಹಾದಿ ದಿಕ್ಕು ತಪ್ಪಿಸುತ್ತಿದೆಯಾ ಅನ್ನೋದನ್ನ ರಾಜಕೀಯ ತಜ್ಷರು ವೀಶ್ಲೇಷಣೆ ಮಾಡತೊಡಗುತ್ತಿದ್ದಾರೆ.

