ಒಂದು ಕಾಲದಲ್ಲಿ ಭಾರತೀಯ ಸಿನಿಮಾ ರಂಗವನ್ನೇ ಕನ್ನಡದತ್ತ ನೋಡುವಂತೆ ಮಾಡಿದ್ದ, ರವಿಚಂದ್ರನ್ ಸಿನಿಮಾಗಳನ್ನು ನೋಡಲಿಕ್ಕೆ ಕರ್ನಾಟಕಕ್ಕೆ ಬರುತ್ತಿದ್ದ ತಮಿಳು ಮತ್ತು ತೆಲುಗು ನಿರ್ದೇಶಕರ ನೆಚ್ಚಿನ ಹೀರೋ ಕ್ರೇಜಿಸ್ಟಾರ್ ರವಿಚಂದ್ರನ್ ತೆಲುಗಿನಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕರ್ನಾಟಕದಲ್ಲೇ ಇವರಿಗೆ ಕೈ ತುಂಬಾ ಕೆಲಸವಿದ್ದರೂ, ಯಾಕೆ ತೆಲುಗು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಕಾರಣವಿದೆ.
ಇವರು ತೆಲುಗಿಗೆ ಹೋಗುತ್ತಿರುವುದು ಬೇರೆ ಯಾರಿಗೂ ಅಲ್ಲ, ಮಹೇಶ್ ಬಾಬು ನಟಿಸಲಿರುವ ಹೊಸ ಸಿನಿಮಾದಲ್ಲಿ ರವಿಚಂದ್ರನ್ ಅವರು ಮಹೇಶ್ ಬಾಬು ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿಯಿದೆ. ಮಹೇಶ್ ಬಾಬುಗಾಗಿ ಅವರು ಆ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಅಧಿಕೃತ ಮಾಹಿತಿಯನ್ನು ಸಿನಿಮಾ ಟೀಮ್ ನೀಡಲಿದೆಯಂತೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ
ಮಹೇಶ್ ಬಾಬು ಅವರು ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಪ್ರಮುಖವಾದ ಪಾತ್ರವನ್ನೇ ನಿರ್ವಹಿಸಲಿದ್ದಾರಂತೆ. ಈಗಾಗಲೇ ಮಹೇಶ್ ಬಾಬು ಈ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದರೆ, ಹೀಗಾಗಿ ರವಿಚಂದ್ರನ್ ಅವರ ಜೊತೆ ಒಂದು ಹಂತದ ಮಾತುಕತೆ ಕೂಡ ಆಗಿದೆಯಂತೆ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ರವಿಚಂದ್ರನ್, ಅವುಗಳನ್ನು ನಿಭಾಯಿಸಿಕೊಂಡು ತೆಲುಗು ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.