ನಿನ್ನೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸದೇ ಇದ್ದರೂ, ಹಲವು ಯೋಜನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ರವಿಚಂದ್ರನ್ ಅವರ ತಾಯಿಯು ಅಗಲಿದ್ದರಿಂದ, ಆ ನೋವಿನಲ್ಲೂ ಅಭಿಮಾನಿಗಳ ಜೊತೆ ಅವರು ಬೆರೆತಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?
Advertisement
ಈ ಹುಟ್ಟು ಹಬ್ಬಕ್ಕೆ ರವಿ ಬೋಪಣ್ಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದ ರವಿಚಂದ್ರನ್, ಈ ಸಿನಿಮಾ ನಂತರ ಮತ್ತೊಂದು ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಈ ಸಿನಿಮಾದ ವಿಶೇಷ ಅಂದರೆ, ಮಕ್ಕಳ ಜೊತೆಗೆ ರವಿಚಂದ್ರನ್ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ಅವರು ವಿಶೇಷ ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್
Advertisement
Advertisement
ರವಿಚಂದ್ರನ್ ಅವರ ಜೊತೆ ಮಕ್ಕಳು ಈಗಾಗಲೇ ಪುಟ್ಟ ಪುಟ್ಟ ಪಾತ್ರಗಳಲ್ಲಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮನುರಂಜನ್ ಮತ್ತು ವಿಕ್ರಮ್ ಜೊತೆ ರವಿಚಂದ್ರನ್ ತೆರೆ ಹಂಚಿಕೊಳ್ಳುತ್ತಿದ್ದು, ಈ ಸಿನಿಮಾಗೆ ‘ಬ್ಯಾಡ್ ಬಾಯ್ಸ್’ ಎಂದು ಹೆಸರಿಟ್ಟಿದ್ದಾರೆ. ಇಂಥದ್ದೊಂದು ಹೆಸರನ್ನು ಅವರು ಇಟ್ಟಿರುವುದಕ್ಕೂ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು
Advertisement
ಸಾಮಾನ್ಯವಾಗಿ ನನ್ನ ಸಿನಿಮಾಗಳ ಶೀರ್ಷಿಕೆಗಳು ಪಾಸಿಟಿವ್ ಆಗಿರುತ್ತವೆ. ಆದರೆ, ಈ ಸಿನಿಮಾ ಹಾಗಿಲ್ಲ. ಗುಡ್ ಬಾಯ್ಸ್ ಅಂತ ಟೈಟಲ್ ಇಡಬಹುದಿತ್ತು. ಹಾಗೆ ಇಟ್ಟರೆ ಯಾರೂ ಸಿನಿಮಾ ನೋಡಲು ಬರುವುದಿಲ್ಲ. ಬ್ಯಾಡ್ ಬಾಯ್ಸ್ ಎಂದು ಹೆಸರಿಟ್ಟರೆ ಏನಿರಬಹುದು ಎಂದು ಕುತೂಹಲಕ್ಕಾದರೂ ಥಿಯೇಟರ್ ಗೆ ಜನ ಬರುತ್ತಾರೆ ಎನ್ನುತ್ತಾರೆ ಕ್ರೇಜಿಸ್ಟಾರ್.