ಜೈಪುರ: ಉದಯಪುರ ಮತ್ತು ಅಹಮದಾಬಾದ್ ಸಂಪರ್ಕಿಸುವ ಹೊಸದಾಗಿ ತೆರೆಯಲಾದ ರೈಲ್ವೇ ಹಳಿಯಲ್ಲಿ (Railway Track) ಬಿರುಕು ಕಂಡುಬಂದ ತಕ್ಷಣ ಆ ಮಾರ್ಗವಾಗಿ ಪ್ರಯಾಣಿಸಲಿದ್ದ ರೈಲುಗಳನ್ನು (Train) ಭಾನುವಾರ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ.
ಮೂಲಗಳ ಪ್ರಕಾರ ಅಸರ್ವಾ-ಉದಯಪುರ ಎಕ್ಸ್‌ಪ್ರೆಸ್ ರೈಲು ಇದೇ ಮಾರ್ಗವಾಗಿ ಸಾಗಬೇಕಿದ್ದ ಗಂಟೆಗಳ ಮೊದಲು ರೈಲ್ವೇ ಹಳಿಯಲ್ಲಿ ಸ್ಫೋಟ (Explosion) ಉಂಟಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಧಿಕಾರಿಗಳಿಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದೇ ಸ್ಥಳದಲ್ಲಿ ಡಿಟೋನೇಟರ್‌ಗಳು ಮತ್ತು ಗನ್‌ಪೌಡರ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಉದಯಪುರ ಭಯೋತ್ಪಾದನಾ ನಿಗ್ರಹ ದಳ (ATS) ಅಧಿಕಾರಿಗಳಿಗೆ ದೊಡ್ಡ ಪಿತೂರಿಯ ಸುಳಿವು ಸಿಕ್ಕಿದ್ದು, ಭಯೋತ್ಪಾದನಾ ಕೋನದಲ್ಲೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಒಂದೇ ದಿನ 61 ಕೆಜಿ ಚಿನ್ನ ವಶ
Advertisement
A very sinister conspiracy to blow up the new Railway track between Udaipur & Ahmedabad in Udaipur. pic.twitter.com/1HFzAkVmN9
— Mayank Jindal (@MJ_007Club) November 13, 2022
Advertisement
ಈ ಕೃತ್ಯದ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಬಿರುಕು ಬಿದ್ದಿರುವ ಹಳಿಯನ್ನು ಸರಿಪಡಿಸಲಾಗುತ್ತಿದೆ. ಶೀಘ್ರವೇ ಈ ಮಾರ್ಗವಾಗಿ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಶೀಘ್ರವೇ ಬರಲಿದೆ ಚಾಲಕನಿಲ್ಲದೇ ಚಲಿಸೋ ರೈಲು
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಅಹಮದಾಬಾದ್‌ನ ಅಸರ್ವಾ ರೈಲು ನಿಲ್ದಾಣದಿಂದ ಈ ಹಳಿಯಲ್ಲಿ ಅಸರ್ವಾ-ಉದಯಪುರ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು.