LatestMain PostNational

ಮುಂಬೈ ಏರ್‌ಪೋರ್ಟ್‌ನಲ್ಲಿ ಒಂದೇ ದಿನ 61 ಕೆಜಿ ಚಿನ್ನ ವಶ

ಮುಂಬೈ: ನಗರದ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಂದೇ ದಿನ ಬರೋಬ್ಬರಿ 32 ಕೋಟಿ ಮೌಲ್ಯದ 61 ಕೆಜಿ ಚಿನ್ನವನ್ನು (Gold) ವಶಪಡಿಸಿಕೊಂಡಿದ್ದಾರೆ. ಇದು ವಿಮಾನ ನಿಲ್ದಾಣದಲ್ಲಿ (Airport) ಒಂದೇ ದಿನದಲ್ಲಿ ಇಲಾಖೆ ನಡೆಸಿದ ಭಾರೀ ಮೌಲ್ಯದ ವಶವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶುಕ್ರವಾರ ನಡೆದ ದಾಳಿಯಲ್ಲಿ ಅಧಿಕಾರಿಗಳು ಐವರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. 2 ಪ್ರತ್ಯೇಕ ಕಾರ್ಯಾರಣೆಯಲ್ಲಿ ಬಂಧನಕ್ಕೊಳಗಾದ ಈ 7 ಜನರಿಂದ ಅಧಿಕಾರಿಗಳು ಒಟ್ಟು 61 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ವಶಪಡಿಸಿಕೊಳ್ಳಲಾದ ಒಂದೇ ದಿನದ ಅತಿ ದೊಡ್ಡ ಮೌಲ್ಯದ ಕಾರ್ಯಾಚರಣೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 2.16 ಕೋಟಿಗೆ ಹಳ್ಳಿಯೇ ಮಾರಾಟ – ಸ್ಪೇನ್‌ನ ಈ ಗ್ರಾಮದಲ್ಲಿ ಏನೆಲ್ಲಾ ಇದೆ ಗೊತ್ತಾ?

ಮೊದಲ ಕಾರ್ಯಾಚರಣೆಯಲ್ಲಿ ತಾಂಜಾನಿಯಾದಿಂದ ಹಿಂದಿರುಗಿದ್ದ ನಾಲ್ವರು ಭಾರತೀಯರಿಂದ 53 ಕೆಜಿ ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದ, ಹಲವು ಪಾಕೆಟ್‌ಗಳನ್ನೊಳಗೊಂಡ ಬೆಲ್ಟ್‌ಗಳಲ್ಲಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದರು. ಈ ಪ್ರಯಾಣಿಕರಿಗೆ ದೋಹಾ ವಿಮಾನ ನಿಲ್ದಾಣದಲ್ಲಿ ಸುಡಾನ್ ಪ್ರಜೆಯೊಬ್ಬರು ಬೆಲ್ಟ್‌ಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್

ಇನ್ನೊಂದು ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂವರು ಪ್ರಯಾಣಿಕರಿಂದ ಅಧಿಕಾರಿಗಳು 8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 2.88 ಕೋಟಿ ರೂ. ಮೌಲ್ಯದ ಚಿನ್ನದ ಚೂರುಗಳನ್ನು ಮೇಣದ (ವ್ಯಾಕ್ಸ್) ರೂಪದಲ್ಲಿ ಸಾಗಿಸುತ್ತಿದ್ದರು ಎಂದು ಹೇಳಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button