ಮಂಡ್ಯ: ಹೋಳಿ ಹಬ್ಬದಂದು ಬಣ್ಣಗಳಲ್ಲಿ ಓಕುಳಿ ಆಡೋದನ್ನ ನೋಡಿರುತ್ತೇವೆ. ಆದರೆ ಸಕ್ಕರೆನಾಡಿನ ಗ್ರಾಮವೊಂದರ ಜನ ಸಗಣಿಯಲ್ಲಿ ಓಕುಳಿ ಆಟ ಆಡುತ್ತಾರೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿಯಾಟ ಆಡಲಾಗುತ್ತದೆ.
ದೀಪಾವಳಿ ಸಮಯದಲ್ಲಿ ಗ್ರಾಮಸ್ಥರು ಸಗಣಿ ಹಬ್ಬವನ್ನು ಪ್ರತಿವರ್ಷ ಆಚರಿಸಿಕೊಂಡು ಬಂದಿದ್ದಾರೆ. ಹಬ್ಬದ ದಿನ ಗ್ರಾಮದ ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಊರಿನ ರಂಗಸ್ಥಳದಲ್ಲಿ ಸೇರಿ ಸಗಣಿಯ ಓಕುಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮದ ಯುವಕರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗುತ್ತದೆ. ಈ ಎರಡು ಗುಂಪುಗಳು ಪರಸ್ಪರ ಸಗಣಿ ಎರಚುತ್ತಾರೆ.
Advertisement
Advertisement
ಯುವಕರ ಎರಡು ಗುಂಪುಗಳನ್ನಾಗಿ ಮಾಡುವ ಮುಖಂಡರು ಸಗಣಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಎರಡು ಗುಂಪುಗಳು ಎದರು ಬದರು ನಿಂತು ಸಗಣಿಯ ಉಂಡೆಗಳಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಈ ಸಗಣಿ ಓಕುಳಿ ಆಟ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಾರೆ.