ಹೈದರಾಬಾದ್: ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಕ್ವಾರಂಟೈನ್‍ನಲ್ಲಿರುವ ಚಿರಂಜೀವಿ ಅವರು ತಮ್ಮ ತಾಯಿಯ ಹುಟ್ಟುಹಬ್ಬದಂದು ಅವರ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಭಾವಾನಾತ್ಮಕ ಸಾಲುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಜನವರಿ 29ರಂದು ಚಿರಂಜೀವಿ ಅವರ ತಾಯಿಯ ಹುಟ್ಟುಹಬ್ಬವಿದ್ದು, ಕೋವಿಡ್ ಇರುವುದರಿಂದ ಕ್ವಾರಂಟೈನ್‍ನಲ್ಲಿರುವ ಚಿರಂಜೀವಿ ಅವರು ಈ ವಿಶೇಷವಾದ ದಿನ ತಮ್ಮ ತಾಯಿಯಿಂದ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತಿಲ್ಲ ಟ್ವಿಟ್ಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿಯೂ ತಪ್ಪೇ ಮಾಡಿಲ್ಲ ಎಂದ ಗಟ್ಟಿಮೇಳ ರಕ್ಷಿತ್ – ಎಫ್‌ಐಆರ್ ಕಾಪಿ ಲಭ್ಯ
Advertisement
Dear All,
Despite all precautions, I have tested Covid 19 Positive with mild symptoms last night and am quarantining at home.
I request all who came in contact with me over the last few days to get tested too.
Can’t wait to see you all back soon!
— Chiranjeevi Konidela (@KChiruTweets) January 26, 2022
Advertisement
ಕೋವಿಡ್ ಸೋಂಕಿಗೆ ಒಳಗಾಗಿರುವ ಚಿರಂಜೀವಿ ಅವರು ತಮ್ಮ ತಾಯಿ ಹಾಗೂ ಪತ್ನಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಜೊತೆಗೆ ತೆಲುಗಿನಲ್ಲಿ ಜನ್ಮ ದಿನದ ಶುಭಾಶಯಗಳು ಅಮ್ಮ. ನಾನು ಕ್ವಾರಂಟೈನ್‍ನಲ್ಲಿರುವುದರಿಂದ ನಿಮ್ಮ ಆಶೀರ್ವಾದವನ್ನು ನೇರವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ನಿಮಗೆ ಶುಭಾಶಯ ಕೋರುತ್ತಿದ್ದೇನೆ. ಈ ಜನ್ಮದಲ್ಲಿ ಮಾತ್ರವಲ್ಲ, ಮುಂದಿನ ಜನ್ಮದಲ್ಲಿಯೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳಲ್ಲಿಯೇ ಚಿರು ತಮ್ಮ ತಾಯಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸಂಗೀತ್ ಕಾರ್ಯಕ್ರಮದಲ್ಲಿ ಸೂರಜ್ ಜೊತೆ ಮೌನಿ ರಾಯ್ ಲಿಪ್‍ಲಾಕ್
Advertisement
అమ్మా !????????
జన్మదిన శుభాకాంక్షలు ????????
క్వరెంటైన్ అయిన కారణంగా నీ ఆశీస్సులు ప్రత్యక్షంగా తీసుకోలేక ఇలా తెలుపుతున్నా..
నీ చల్లని దీవెనలు ఈ జన్మకే కాదు మరు జన్మలకి కూడా కావాలని ఆ భగవంతుడ్ని కోరుకొంటూ ????
అభినందనలతో …. శంకరబాబు pic.twitter.com/DF6FS1eP3p
— Chiranjeevi Konidela (@KChiruTweets) January 29, 2022
ಇತ್ತೀಚೆಗಷ್ಟೇ ಕೋವಿಡ್-19 ಪಾಸಿಟಿವ್ ಬಂದಿದ್ದ ಚಿರಂಜೀವಿ ಅವರು, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ನಿನ್ನೆ ರಾತ್ರಿ ನನಗೆ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೆ. ನನಗೆ ಕೊರೊನಾ ಸೋಂಕು ದೃಢವಾಗಿದ್ದು, ಇದೀಗ ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕ ಹೊಂದಿದ್ದ ಎಲ್ಲರಿಗೂ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.