ನವದೆಹಲಿ: ಒಮಿಕ್ರಾನ್ ಮತ್ತು ಕೊರೊನಾ 3ನೇ ಅಲೆ ಆತಂಕ ಹಿನ್ನೆಲೆ ಮೂರನೇ ಡೋಸ್ ಲಸಿಕೆ ಬಗ್ಗೆ ಚರ್ಚೆ ನಡಿಯುತ್ತಿದೆ. ಈ ಹೊತ್ತಲ್ಲಿಯೇ ಬೂಸ್ಟರ್ ಡೋಸ್‍ಗೆ ಸಂಬಂಧಿಸಿದ ವರದಿಯನ್ನು ಸಂಸದೀಯ ಸಮಿತಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲ್ಲಿಸಿದೆ. ಅದರ ಪ್ರಕಾರ, ತುರ್ತು ಸಂದರ್ಭ ಇದ್ದಲ್ಲಿ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಬೂಸ್ಟರ್ ಡೋಸ್ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳುವ ಮೊದಲು ಕೆಲ ಸಲಹೆಗಳನ್ನು ಪಾಲಸಲು ತಿಳಿಸಿದೆ. ಎರಡನೇ ಡೋಸ್ ತೆಗೆದುಕೊಂಡ 9 ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅನುಮತಿ ಕೊಟ್ಟಿದೆ. ಓಮಿಕ್ರಾನ್ ಮತ್ತು ಕೊರೊನಾ ಇತರ ತಳಿ ಬಗ್ಗೆ ಐಸಿಎಂಆರ್ ಕೇಂದ್ರಕ್ಕೆ ಸಲಹೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಬೂಸ್ಟರ್ ಡೋಸ್ ನೀಡಿಕೆ ಸಂಬಂಧ ಖಚಿತ ನಿಲುವಿಗೆ ಬಾರದ ಹಿನ್ನೆಲೆಯಲ್ಲಿ ಇನ್ನಷ್ಟು ದಿನಗಳ ಕಾಲ ಕಾದು ನೋಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ
Advertisement
Advertisement
ಪ್ರಾಥಮಿಕ ಲಸಿಕೆ ಬಗ್ಗೆ ನಿಗಾ ವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಸಂಬಂಧ ಇವತ್ತು ಕೂಡ ಯಾವುದೇ ತೀರ್ಮಾನ ಹೊರಬಿದ್ದಿಲ್ಲ. ಐಸಿಎಂಆರ್ ಕೂಡ ಬೂಸ್ಟರ್ ಡೋಸ್ ನೀಡಿಕೆಗೆ ಒಲವು ತೋರಿದೆ. ಈ ನಡುವೆ ಸಿಂಗಾಪುರದಲ್ಲಿ ಬೂಸ್ಟರ್ ಡೋಸ್ ಪಡೆದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವುದು ವೈದ್ಯಕೀಯ ಲೋಕದಲ್ಲಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ
Advertisement
Advertisement
ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವೀಯ ಮಾತನಾಡಿ, ಕೋವಿಡ್-19 ತಜ್ಞರ ಪ್ರಕಾರ ಬೂಸ್ಟರ್ ಡೋಸ್ ಪಡೆಯುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದೇಶದಲ್ಲಿ ಈಗಾಗಲೇ 86% ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 7 ಕೋಟಿ ಲಸಿಕೆ ಇದೀಗ ಹಂಚಿಕೆಯಾಗುತ್ತಿದೆ. ಈ ನಡುವೆ ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ 50ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.ಇದನ್ನೂ ಓದಿ: ಕರ್ನಾಟಕ: ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೊಸ ಗೈಡ್‌ಲೈನ್ಸ್