CoronaLatestMain PostNational

ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

ಗಾಂಧೀನಗರ: ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ ಬಾಮೈದುನನಿಗೂ ಸೋಂಕು ದೃಢಪಟ್ಟಿದೆ. ಆ ಮೂಲಕ ಗುಜರಾತ್‌ ರಾಜ್ಯದಲ್ಲಿ ಓಮಿಕ್ರಾನ್‌ ಸೋಂಕಿತ ಮೂರು ಪ್ರಕರಣಗಳು ವರದಿಯಾಗಿವೆ ಎಂದು ಜಾಮ್‌ನಗರ ಮುನಿಸಿಪಲ್‌ ಕಾರ್ಪೊರೇಷನ್‌ ತಿಳಿಸಿದೆ.

ಸೋಂಕಿತರಿಬ್ಬರನ್ನೂ ನಗರದ ಗುರು ಗೋವಿಂದ ಸಿಂಗ್‌ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ. ಜಿಂಬಾಬ್ವೆಯಿಂದ ಗುಜರಾತ್‌ಗೆ ವಾಪಸ್ಸಾಗಿದ್ದ ಎನ್‌ಆರ್‌ಐ ವ್ಯಕ್ತಿಯಲ್ಲಿ ಓಮಿಕ್ರಾನ್‌ ಪತ್ತೆಯಾಗಿತ್ತು. ಆತನೊಂದಿಗೆ ಪತ್ನಿಯೂ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಸೋಂಕಿತ ವ್ಯಕ್ತಿ ಪತ್ನಿ ಜೊತೆ ಬಾಮೈದುನನ ನಿವಾಸದಲ್ಲಿ ಉಳಿದುಕೊಂಡಿದ್ದರು. ಪತ್ನಿ ಹಾಗೂ ಬಾಮೈದುನನನ್ನೂ ಪರೀಕ್ಷೆಗೆ ಒಳಪಡಿಸಿದಾಗ ಓಮಿಕ್ರಾನ್‌ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ

ದೇಶದಲ್ಲಿ ಈವರೆಗೆ ಒಟ್ಟು 25 ಓಮಿಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಎಲ್ಲಾ ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಓಮಿಕ್ರಾನ್‌ ಸೋಂಕಿತ ಗುಣಮುಖನಾಗಿ ಡಿಸ್ಚಾರ್ಜ್‌ ಆಗಿದ್ದಾನೆ.

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಯಿತು. ನಂತರ ಮಹಾರಾಷ್ಟ್ರ, ರಾಜಸ್ಥಾನ್‌, ಗುಜರಾತ್‌, ದೆಹಲಿಯಲ್ಲಿ ಸೋಂಕು ಪ್ರಕರಣಗಳು ವರದಿಯಾಗಿವೆ. ಅಂತೆಯೇ ವಿಶ್ವದ 58 ದೇಶಗಳಿಗೆ ಓಮಿಕ್ರಾನ್‌ ಸೋಂಕು ಹರಡಿದೆ. ಇದನ್ನೂ ಓದಿ: ಕರ್ನಾಟಕ: ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

Leave a Reply

Your email address will not be published.

Back to top button