ಜೈಪುರ್: ಹಳ್ಳಿಯೊಂದಕ್ಕೆ ಕೋವಿಡ್ 19 ಲಸಿಕೆ ಹಿಡಿದು ಬಂದ ಆರೋಗ್ಯ ಸಿಬ್ಬಂದಿಯನ್ನು ಹಿರಿಯ ಮಹಿಳೆಯೊಬ್ಬರು ಹಾವು ತೋರಿಸಿ ಹೆದರಿಸಿರುವ ಘಟನೆ ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದಿದೆ.
Advertisement
ಅಜ್ಮೇರ್ ಜಿಲ್ಲೆಯ ಪಿಸಂಗನ್‍ನ ನಾಗೇಲಾವ್ ಗ್ರಾಮಕ್ಕೆ ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಅದರಂತೆ ಒಂದು ಮನೆಯ ಬಾಗಿಲಲ್ಲಿ ನಿಂತ ಅವರಿಗೆ ಅಕ್ಷರಶಃ ಶಾಕ್ ಕಾದಿತ್ತು. ಆ ಮನೆಯ ಮಹಿಳೆ ಕಮಲಾ ದೇವಿ ಕೈಯಲ್ಲೊಂದು ಚಿಕ್ಕ ಬುಟ್ಟಿ ಹಿಡಿದಿದ್ದರು. ಅದರಲ್ಲಿ ನಾಗರಹಾವು ಹೆಡೆಬಿಚ್ಚಿ ಕುಳಿತಿತ್ತು. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ
Advertisement
Advertisement
ಕಮಲಾದೇವಿ ಕಲ್ಬೇಲಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಹಾವು ಹಿಡಿಯುವುದು, ಅದನ್ನು ನಿಯಂತ್ರಿಸಿ, ಆಟ ಆಡಿಸುವುದು ಇವರ ಕಸುಬಾಗಿದೆ. ಆದರೆ ಆ ಹಾವನ್ನು ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರ ವಿರುದ್ಧ ಶಸ್ತ್ರವಾಗಿ ಆಕೆ ಬಳಸಿದ್ದಾಳೆ. ನನಗೆ ಲಸಿಕೆ ಬೇಡ. ಲಸಿಕೆ ಹಾಕಲು ಮುಂದೆ ಬಂದರೆ ನಿಮ್ಮ ಮೇಲೆ ಹಾವನ್ನು ಬಿಡುತ್ತೇನೆ ಎಂದು ಅವರು ಹೆದರಿಸುತ್ತಿದ್ದರು. ಇದನ್ನೂ ಓದಿ: ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್
Advertisement
ವೈದ್ಯಕೀಯ ಸಿಬ್ಬಂದಿ, ಅದರಿಂದ ಏನೂ ಅಪಾಯವಿಲ್ಲ ಎಂದು ಹೇಳಿ ಆಕೆಯನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾವನ್ನು ತೋರಿಸಿದಾಗ ಹೆದರಿದ ವೈದ್ಯಕೀಯ ಸಿಬ್ಬಂದಿ ತಮಗೆ ಸಹಾಯ ಮಾಡುವಂತೆ ಸ್ಥಳೀಯರನ್ನು ಕೇಳಿಕೊಂಡಿದ್ದಾರೆ. ನಂತರ ಇನ್ನೂ ಕೆಲವರು ಬಂದು ಎಲ್ಲರೂ ಸೇರಿ ಕಮಲಾ ದೇವಿಯಲ್ಲಿ ತಿಳಿವಳಿಕೆ ಮೂಡಿಸಿದರು. ಬಳಿಕ ಅವರು ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಕಮಲಾ ದೇವಿ ಜತೆ ಇನ್ನೂ 20 ಮಂದಿ ತಮಗೆ ಲಸಿಕೆ ಬೇಡ ಎನ್ನುತ್ತಿದ್ದರು. ಆದರೆ ಈಕೆ ವ್ಯಾಕ್ಸಿನ್ ಪಡೆಯುತ್ತಿದ್ದಂತೆ ಅವರೂ ಕೂಡ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್