LatestDharwadDistrictsKarnataka

ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ

– ನಾನು ಆರ್‌ಎಸ್‍ಎಸ್ ವಿರೋಧಿ
– ಬಿಎಸ್‍ವೈ ಭೇಟಿ ದೃಢಪಡಿಸಿದರೆ ರಾಜಕೀಯ ನಿವೃತ್ತಿ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‍ಎಸ್‍ನವರು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

SIDDU

ಹಾನಗಲ್ ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಯಾವುದು ಹೊಸ ರಾಜಕೀಯ ಚಿಂತನೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಎಸ್‍ವೈ ಭೇಟಿ ವಿಚಾರವನ್ನ ಅಲ್ಲಗೆಳೆದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

Basavaraj bommai

ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ. ಅವರ ತಂದೆ ಆರ್‌ಎಸ್‍ಎಸ್‍ನಲ್ಲಿ ಇದ್ದರಾ..? ಬೊಮ್ಮಾಯಿ ಕುರ್ಚಿ ಉಳಿಸಿಕೊಳ್ಳಲು ಆರ್‍ಎಸ್‍ಎಸ್ ಹೊಗಳಬೇಕು ಅಲ್ವಾ ಎಂದು ಆರ್‌ಎಸ್‍ಎಸ್ ಕುರಿತಾಗಿ ಮಾತನಾಡುತ್ತಾ ಸಿಎಂ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

ರಾಜ್ಯದಲ್ಲಿ ಚಾಣಕ್ಯ ವಿವಿ ಸ್ಪಾಪನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ. ಚಾಣುಕ್ಯ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಪಾಪನೆ ಮಾಡಲು ಆರ್‌ಎಸ್‍ಎಸ್ ನವರು ಹೊರಟಿದ್ದಾರೆ. ಒಂದೂವರೆ ಕೋಟಿ ರೂಪಾಯಿಗೆ ಒಂದು ಎಕರೆಯಂತೆ ವಶಪಡಿಸಿಕೊಂಡ 116 ಎಕರೆ 16 ಗುಂಟೆ ಜಮೀನನ್ನ ನೀಡಲು ಸರ್ಕಾರ ಮುಂದಾಗಿದೆ. ಆ ಭೂಮಿಯನ್ನ ಕೇವಲ 50 ಕೋಟಿ ರೂಪಾಯಿಗೆ ಆ ಜಮೀನನ್ನ ನೀಡಲು ಹೊರಟಿದ್ದಾರೆ. ಆದರೆ ಅದು ಸಧ್ಯ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಆಗಿದೆ. ಅತಂಹ ಬೆಲೆ ಬಾಳುವ ಜಮೀನನ್ನು ವಿವಿ ಸ್ಥಾಪನೆಗೆ ನೀಡಲು ಮುಂದಾಗಿರುವುದು ಸರಿಯಲ್ಲವೆಂದು ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

siddu 1

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ರಾಜಕೀಯ ಭೇಟಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ನಾನು ಭೇಟಿಯಾಗಿದ್ದು ಅಪ್ಪಟ್ಟ ಸುಳ್ಳು. ಅವರು ಆರ್‌ಎಸ್‌ಎಸ್‌ನಿಂದ ಬಂದವರು. ನಾನು ಆರ್‌ಎಸ್‍ಎಸ್ ವಿರೋಧಿ. ನಾನು ಅವರ ತದ್ವಿರುದ್ಧ. ನಾನು ಬಿಎಸ್‍ವೈ ಅವರು ಭೇಟಿಯಾಗಿದ್ದು, ದೃಢಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲ ಎಸೆದಿದ್ದಾರೆ.

Related Articles

Leave a Reply

Your email address will not be published. Required fields are marked *