ನವದೆಹಲಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ಐತಿಹಾಸಿಕಾ ಸಾಧನೆ ಮಾಡಿದ್ದು ಒಟ್ಟು 100 ಕೋಟಿ ಲಸಿಕೆಯನ್ನು ವಿತರಿಸಿದೆ.
India is leading the fight against COVID-19 and supporting the vulnerable! #VaccineCentury pic.twitter.com/CrEbSXXN0G
— MyGovIndia (@mygovindia) October 21, 2021
Advertisement
ಈ ಪೈಕಿ ಶೇ.22.55 ರಷ್ಟು ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಅಂದರೆ ಎರಡು ಡೋಸ್ ಪಡೆದುಕೊಂಡಿದ್ದಾರೆ. 138 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆರಂಭದಲ್ಲಿ ಲಸಿಕೆ ಅಭಾವ ಆದರೂ ಕೇಂದ್ರ ಸರ್ಕಾರದ ಬೇಡಿಕೆಗೆ ತಕ್ಕಂತೆ ಪುಣೆ ಸೀರಂ ಮತ್ತು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ವಿತರಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ.
Advertisement
With 2.5 crore doses administered in a single day on 17th September 2021, India created a new record under the world’s #LargestVaccineDrive! #VaccineCentury pic.twitter.com/nBF1q0oWVQ
— MyGovIndia (@mygovindia) October 21, 2021
Advertisement
ಕೇಂದ್ರ ಸರ್ಕಾರ ಈ ವರ್ಷದ ಅಂತ್ಯದ ಒಳಗಡೆ ದೇಶದ 94 ಕೋಟಿ ವಯಸ್ಕರಿಗೆ ಲಸಿಕೆ ನೀಡಬೇಕೆಂಬ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಅಭಿನಂದನೆಗಳು ಇಂಡಿಯಾ – 100 ಕೋಟಿ ಲಸಿಕೆ ವಿತರಿಸಿ ಮೈಲಿಗಲ್ಲು
Advertisement
ಯಾವ ದೇಶದಲ್ಲಿ ಎಷ್ಟು?
ವಿಶ್ವದಲ್ಲಿ ಅತೀ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ದೇಶ ಚೀನಾ. ಒಟ್ಟು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಈ ವರೆಗೆ 223.2 ಕೋಟಿ ಡೋಸ್ ಲಸಿಕೆ ನೀಡಿದ್ದು ಈ ಮೂಲಕ ಶೇ.74.97 ಜನರಿಗೆ ಎರಡೂ ಲಸಿಕೆಯನ್ನು ವಿತರಣೆ ಮಾಡಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇಂದು 100 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸೃಷ್ಟಿಸಿದೆ.
Combating common myths and misconceptions, our scientific community, corona warriors and citizens ushered new confidence in the fight against COVID-19. #VaccineCentury pic.twitter.com/wWhmkbANbo
— MyGovIndia (@mygovindia) October 21, 2021
ಅಮೆರಿಕದಲ್ಲಿ ಒಟ್ಟು 32.95 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 40.8 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು ಈವರೆಗೆ ಶೇ.57.62 ಜನ ಎರಡು ಡೋಸ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‍ನಲ್ಲಿ 6.7 ಕೋಟಿ ಜನಸಂಖ್ಯೆ ಇದೆ. ಒಟ್ಟು 9.5 ಕೋಟಿ ಲಸಿಕೆ ವಿತರಣೆಯಾಗಿದ್ದು, ಶೇ.67.08 ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೋರಾಟದಲ್ಲಿ ಭಾರತದ ಮೈಲಿಗಲ್ಲು – 100 ಕೋಟಿ ಲಸಿಕೆ ವಿತರಣೆ
India is leading the world with its fastest vaccination pace! #VaccineCentury pic.twitter.com/Dw86cfmtYT
— MyGovIndia (@mygovindia) October 21, 2021
ಜರ್ಮನಿಯಲ್ಲಿ 8.3 ಕೋಟಿ ಜನಸಂಖ್ಯೆ ಇದ್ದು, 10.9 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿ ಶೇ.65.75 ಜನರಿಗೆ ಲಸಿಕೆ ಕೊಟ್ಟಿದೆ. 6.74 ಕೋಟಿ ಜನಸಂಖ್ಯೆ ಹೊಂದಿರುವ ಫ್ರಾನ್ಸ್‍ನಲ್ಲಿ 10.1 ಕೋಟಿ ಡೋಸ್ ವಿತರಣೆ ಮಾಡಿ ಶೇ.67.56 ಜನ ಲಸಿಕೆ ಸ್ವೀಕರಿಸಿದ್ದಾರೆ.
Congratulations India! We are 100 Crores strong against #COVID19 ! #VaccineCentury #COVIDGroundZero #TyoharonKeRangCABKeSang @PMOIndia @mansukhmandviya @ianuragthakur @DrBharatippawar @PIB_India @mygovindia @COVIDNewsByMIB @ICMRDELHI @DDNewslive @airnewsalerts pic.twitter.com/YvmnMGafIO
— Ministry of Health (@MoHFW_INDIA) October 21, 2021
ಇಸ್ರೇಲ್‍ನಲ್ಲಿ ಒಟ್ಟು 94 ಲಕ್ಷ ಜನಸಂಖ್ಯೆ ಇದ್ದು ಅದರಲ್ಲಿ 1.5 ಕೋಟಿ ಡೋಸ್ ಲಸಿಕೆ ಪಡೆದರೆ ಶೇ. 62.97 ಜನರು ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಇಟಲಿಯಲ್ಲಿ 5.96 ಕೋಟಿ ಜನಸಂಖ್ಯೆಗೆ 8.7 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು, ಶೇ. 70.08 ಜನ ಎರಡು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ
बधाई हो भारत!
दूरदर्शी प्रधानमंत्री श्री @NarendraModi जी के समर्थ नेतृत्व का यह प्रतिफल है।#VaccineCentury pic.twitter.com/11HCWNpFan
— Dr Mansukh Mandaviya (@mansukhmandviya) October 21, 2021
8.43 ಕೋಟಿ ಜನಸಂಖ್ಯೆ ಇರುವ ಟರ್ಕಿಯಲ್ಲಿ ಈಗಾಗಲೇ 11.3 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಇದರೊಂದಿಗೆ ಇಲ್ಲಿ ಶೇ. 56.70 ಜನ ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.