ಲಂಡನ್: ವಿಶ್ವಾದ್ಯಂತ ಓಮಿಕ್ರಾನ್ ಅಟ್ಟಹಾಸದಿಂದ ಮೆರೆಯುತ್ತಿದ್ದು, ಜಗತ್ತಿನಲ್ಲಿಯೇ ಕೊರೊನಾ ಹೊಸ ರೂಪಾಂತರಿ ತಳಿ ಓಮಿಕ್ರಾನ್‍ಗೆ ಬ್ರಿಟನ್‍ನಲ್ಲಿ ಮೊದಲ ಸೋಂಕಿತ ಬಲಿಯಾಗಿದ್ದಾರೆ.
Advertisement
ಈ ಕುರಿತಂತೆ ಮಾಹಿತಿ ನೀಡಿದ ಬ್ರಿಟನ್ ಪ್ರಧಾನಿ ಬೋರಿನ್ ಜಾನ್ಸನ್, ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಓಮಿಕ್ರಾನ್ ಸೋಂಕಿಗೆ ವ್ಯಕ್ತಿ ಒಬ್ಬರು ಬಲಿಯಾಗಿರುವುದು ಬಹಳ ದುಃಖಕರವಾದ ವಿಚಾರ. ಓಮಿಕ್ರಾನ್ ತಡೆಯಲು ದೇಶದಲ್ಲಿ ಮಹತ್ವಾಕಾಂಕ್ಷೆಯ ಕೋವಿಡ್ ಬೂಸ್ಟರ್ ಡೋಸ್ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್‍ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಶಾಟ್ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ
Advertisement
Advertisement
ಭಾರತದಲ್ಲಿಯೂ ಓಮಿಕ್ರಾನ್ ಸೋಂಕು ವೇಗವಾಗಿ ಹಬ್ಬಲಿದೆ ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಸಾಂಕ್ರಾಮಿಕ ತಜ್ಞೆ ಜ್ಯೂಲಿಯೆಟ್ ಪುಲ್ಯಿಯಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‍ನಿಂದಾಗಿ ಸೋಂಕು ಸಮುದಾಯಕ್ಕೆ ಹಬ್ಬುತ್ತಿದೆ. 2 ಡೋಸ್ ಲಸಿಕೆ ಪಡೆದವರಲ್ಲೂ ಓಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ಎಷ್ಟೇ ಸುರಕ್ಷತೆ ವಹಿಸಿದ್ದರೂ ಕೂಡ ಓಮಿಕ್ರಾನ್ ಸೋಂಕಿನ ಉಪ ತಳಿ ಬಿಎ.1 ವೇಗವಾಗಿ ಹಬ್ಬುತ್ತಿದೆ. ಆದರೆ ಒಮಿಕ್ರಾನ್ ಸೋಂಕು ಅಪಾಯಕಾರಿಯೇ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ