ಕೊಲಂಬೋ: ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾ (Sri Lanka) ಸಹಯೋಗದಲ್ಲಿ ನಡೆಯಲಿರುವ ಏಷ್ಯಾ ಕಪ್ 2023ರ (Asia Cup 2023) ಮೊದಲು ಶ್ರೀಲಂಕಾದ ಇಬ್ಬರು ಕ್ರಿಕೆಟಿಗರು ಕೋವಿಡ್ -19ಗೆ ಗುರಿಯಾಗಿದ್ದಾರೆ. ಅವಿಷ್ಕಾ ಫರ್ನಾಂಡೋ ಮತ್ತು ಆರಂಭಿಕ ಬ್ಯಾಟರ್ ಕುಸಲ್ ಪೆರೆರಾ ಅವರಿಗೆ ಕೋವಿಡ್ -19 ಕಾಣಿಸಿಕೊಂಡಿದೆ.
ಅವಿಷ್ಕಾ ಫರ್ನಾಂಡೋ ಮತ್ತು ಕುಸಾಲ್ ಪೆರೆರಾ ಇಬ್ಬರನ್ನೂ ಏಷ್ಯಾ ಕಪ್‍ಗಾಗಿ ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಪಂದ್ಯದ ವೇಳೆಗೆ ಅವರು ಚೇತರಿಸಿಕೊಂಡರೆ ಆಯ್ಕೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ (Cricket) ತಂಡ ತಿಳಿಸಿದೆ. ಇಬ್ಬರೂ ಆಟಗಾರರಿಗೆ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಈ ವಿಚಾರ ತಿಳಿದು ಬಂದಿದೆ. ಆಗಸ್ಟ್ 20 ರಂದು ಕೊನೆಗೊಂಡ ಎಲ್‍ಪಿಎಲ್‍ನ ಅಂತಿಮ ಹಂತಗಳಲ್ಲಿ ಫರ್ನಾಂಡೋ ಮತ್ತು ಪೆರೇರಾ ವೈರಸ್ ದಾಳಿಗೆ ತುತ್ತಾಗಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಏಷ್ಯಾ ಕಪ್ 2023 – ಯೋ ಯೋ ಟೆಸ್ಟ್‌ನಲ್ಲಿ 17.2 ಸ್ಕೋರ್ ಗಳಿಸಿದ ಕೊಹ್ಲಿ
Advertisement
Advertisement
ವರ್ಷದ ಆರಂಭದಿಂದಲೂ ಏಕದಿನ ಪಂದ್ಯಗಳನ್ನು ಆಡದ ಅವಿಷ್ಕಾ ಫರ್ನಾಂಡೋ ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಕಾಣಿಸಿಕೊಂಡಿದ್ದರು. ಅವರು 10 ಪಂದ್ಯಗಳಲ್ಲಿ 244 ರನ್ ಗಳಿಸಿದ್ದಾರೆ.
Advertisement
Advertisement
ಕುಸಾಲ್ ಪೆರೆರಾ ಅವರು ಗಾಯಗಳಿಂದ ಜನವರಿ 2021 ರಿಂದ ಕ್ರಿಕೆಟ್‍ನಿಂದ ಹೊರಗುಳಿದಿದ್ದರು. ಬಳಿಕ ಅವರು ಎಲ್‍ಪಿಎಲ್ 2023 ಋತುವಿನಲ್ಲಿ ಆಡಿದ್ದರು. ಅವರು 8 ಪಂದ್ಯಗಳಲ್ಲಿ 210 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್
Web Stories