ಬೆಂಗಳೂರು: ಮಾಸ್ಕ್(Mask) ಹಾಕಿದರೆ ಮಾತ್ರ ಮೆಟ್ರೋ ನಿಲ್ದಾಣ(Metro Station) ಪ್ರವೇಶಕ್ಕೆ ಈಗ ಅನುಮತಿ ನೀಡಲಾಗುತ್ತದೆ.
ಚೀನಾದಲ್ಲಿ(China) ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮೊದಲಿದ್ದ ಕೊರೊನಾ ನಿಯಮ ಪಾಲನೆಗೆ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ‘ಸಂಜೀವಿನಿ’ ಕೊರತೆ – ಬೂಸ್ಟರ್ ಡೋಸ್ ಬಳಕೆಗೆ ಜಾಗೃತಿ
Advertisement
Advertisement
ಭದ್ರತಾ ಸಿಬ್ಬಂದಿ ಮಾಸ್ಕ್ ಹಾಕದವರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಹೀಗಾಗಿ ಮೆಟ್ರೋ ನಿಲ್ದಾಣಗಳ ಮುಂದೆ ಮತ್ತೆ ಮಾಸ್ಕ್ ಮಾರಾಟ ಶುರುವಾಗಿದೆ.
Advertisement
ಹಾಗೆ ನೋಡಿದರೆ ಕೊರೊನಾ ಕಡಿಮೆಯಾಗಿದ್ದರೂ ಮೆಟ್ರೋದಲ್ಲಿ ಪ್ರಯಾಣಿಕರು ಮಸ್ಕ್ ಧರಿಸಿಯೇ ಪ್ರಯಾಣಿಸುತ್ತಿದ್ದರು. ಬೇರೆ ಕಡೆ ಪಾಲನೆ ಮಾಸ್ಕ್ ನಿಯಮ ಪಾಲನೇ ಆಗದೇ ಇದ್ದರೂ ಮೆಟ್ರೋದಲ್ಲಿ ಪಾಲನೆ ಆಗುತ್ತಿತ್ತು. ಭದ್ರತಾ ತಪಾಸಣೆಯ ವೇಳೆ ಮಾಸ್ಕ್ ಧರಿಸಬೇಕಾಗುತ್ತಿತ್ತು. ತಪಾಸಣೆಯ ಬಳಿಕ ಕೆಲವರು ಪ್ರಯಾಣದ ಸಮಯದಲ್ಲಿ ಮಾಸ್ಕ್ ತೆಗೆಯುತ್ತಿದ್ದರು. ಮಾಸ್ಕ್ ಧರಿಸದೆಯೇ ಪ್ರಯಾಣಿಸುತ್ತಿದ್ದವರಿಗೆ ಸಿಬ್ಬಂದಿ ಸ್ಥಳಕ್ಕೆ ಬಂದು ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು.