– ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆ
ಬೆಂಗಳೂರು: ಕರ್ನಾಟಕದಲ್ಲಿ 15 ಮಂದಿಗೆ ಕೊರೊನಾ ಬಂದಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.
ಸರ್ಕಾರ ಈಗ ಬೆಳಗಿನ ವರದಿಯನ್ನು ಬಿಡುಗಡೆ ಮಾಡಿದ್ದು, ಸಂಜೆ ಮತ್ತೊಂದು ವರದಿ ಬಿಡುಗಡೆ ಮಾಡಲಿದೆ. ಬೆಳಗಾವಿ ಮತ್ತು ಮಂಡ್ಯದಲ್ಲಿ ಒಬ್ಬನಿಂದ ಮೂವರಿಗೆ, ಬೀದರ್‌ನಲ್ಲಿ ಓರ್ವನಿಂದ ಇಬ್ಬರಿಗೆ ಕೊರೊನಾ ಬಂದಿದೆ. ಇವರಿಗೆಲ್ಲ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳ ಸಂಪರ್ಕದಿಂದಾಗಿ ಕೊರೊನಾ ಬಂದಿದೆ.
Advertisement
Advertisement
ದೆಹಲಿಗೆ ವ್ಯಾಪಾರಕ್ಕೆ ತೆರಳಿದ ಹುಬ್ಬಳ್ಳಿಯ ವ್ಯಕ್ತಿಯಿಂದಾಗಿ ಇಂದು 4 ಮಂದಿಗೆ ಸೋಂಕು ತಗುಲಿದೆ. ದೆಹಲಿಗೆ ಪ್ರಯಾಣ ಬೆಳೆಸಿದ ದೊಡ್ಡಬಳ್ಳಾಪುರಧ ಮತ್ತು ಉಸಿರಾಟದ ತೊಂದರೆ ಇರುವ ಬೆಂಗಳೂರಿನ ವ್ಯಕ್ತಿಗೆ ಕೊರೊನಾ ಬಂದಿದೆ.
Advertisement
ರೋಗಿ 233 – 55 ವರ್ಷದ ಧಾರವಾಡದ ವ್ಯಕ್ತಿ, ರೋಗಿ 194ರ ಸಂಪರ್ಕ.
ರೋಗಿ 234 – 3.6 ವರ್ಷದ ಗಂಡು ಮಗು, ರೋಗಿ 194ರ ಸಂಪರ್ಕ.
ರೋಗಿ 235 – 74 ವರ್ಷದ ವರ್ಷದ ವೃದ್ಧೆ, ರೋಗಿ 194ರ ಸಂಪರ್ಕ.
ರೋಗಿ 236 – 37 ವರ್ಷದ ಧಾರವಾಡದ ವ್ಯಕ್ತಿ, ರೋಗಿ 194ರ ಸಂಪರ್ಕ.
Advertisement
ರೋಗಿ 237 – 60 ವರ್ಷದ ಮಳವಳ್ಳಿಯ ವೃದ್ಧೆ, ಮಗನ(ರೋಗಿ 179) ಸಂಪರ್ಕ.
ರೋಗಿ 238 – 8 ವರ್ಷದ ಹೆಣ್ಣು ಮಗು, ರೋಗಿ 179ರ ಸಂಪರ್ಕ.
ರೋಗಿ 239 – 18 ವರ್ಷದ ಯುವಕ, ರೋಗಿ 179ರ ಸಂಪರ್ಕ.
ರೋಗಿ 240 – 27 ವರ್ಷದ ಬಾಗಲಕೋಟೆ ಮುಧೋಳ್ ಯುವಕ, ರೋಗಿ 164ರ ಸಂಪರ್ಕ.
ರೋಗಿ 241 – 16 ವರ್ಷದ ಬೀದರ್ ಬಾಲಕಿ, ರೋಗಿ 211ರ(ಸಹೋದರನ ಮಗಳು) ಸಂಪರ್ಕ.
ರೋಗಿ 243 – 20 ವರ್ಷದ ಬೆಳಗಾವಿಯ ಯುವಕ, ರೋಗಿ 149ರ ಸಂಪರ್ಕ.
ರೋಗಿ 244 – 14 ವರ್ಷದ ಬೆಳಗಾವಿಯ ಬಾಲಕ, ರೋಗಿ 149ರ ಸಂಪರ್ಕ.
ರೋಗಿ 245 – 45 ವರ್ಷದ ಬೆಳಗಾವಿ ವ್ಯಕ್ತಿ, ರೋಗಿ 149ರ ಸಂಪರ್ಕ.
ರೋಗಿ 246 – 39 ವರ್ಷದ ದೊಡ್ಡಬಳ್ಳಾಪುರದ ವ್ಯಕ್ತಿ, ದೆಹಲಿ ಪ್ರಯಾಣದ ಹಿನ್ನೆಲೆ.
ರೋಗಿ 247 – 62 ವರ್ಷದ ಬೆಂಗಳೂರಿನ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ.