ಬೀಜಿಂಗ್: ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು ಮರೆ ಮಾಡಿತ್ತೆ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಕೊರೊನಾ ವೈರಸಿನ ಹುಟ್ಟೂರು ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆ ದಿಢೀರ್ ಶೇ.50 ರಷ್ಟು ಹೆಚ್ಚಾಗಿದೆ. ಗುರುವಾರದವರೆಗೆ ವುಹಾನ್ ನಗರದಲ್ಲಿ 2,579 ಜನ ಮೃತಪಟ್ಟಿದ್ದರು. ಆದರೆ ಈಗ ಹೊಸದಾಗಿ 1,290 ಮಂದಿ ಸೇರಿದ್ದು ಒಟ್ಟು ಸಾವನ್ನಪ್ಪಿದ ರೋಗಿಗಳ ಸಂಖ್ಯೆ 3,869ಕ್ಕೆ ಏರಿಕೆಯಾಗಿದೆ.
Advertisement
Advertisement
ಅಮೆರಿಕ, ಇಟಲಿಯಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿರುವಾಗ ವುಹಾನ್ ನಗರದಲ್ಲಿನ ಮೃತರ ಸಂಖ್ಯೆ ಬಗ್ಗೆ ಮೊದಲೇ ಅನುಮಾನವಿತ್ತು. ಈಗ ವುಹಾನ್ ನಗರದಲ್ಲಿ ಲಾಕ್‍ಡೌನ್ ಸಂಪೂರ್ಣವಾಗಿ ತೆಗೆದ ಬಳಿಕ ಚೀನಾ ಸರ್ಕಾರ ಈ ಮಾಹಿತಿಯನ್ನು ನೀಡಿದೆ.
Advertisement
ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಸ್ಥಳೀಯ ಸರ್ಕಾರ ತಪ್ಪು ವರದಿ, ವಿಳಂಬ ನೀತಿಯಿಂದಾಗಿ ಈ ಸಂಖ್ಯೆ ಬೆಳಕಿಗೆ ಬಂದಿರಲಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಎಡವಟ್ಟು
Advertisement
ಆರಂಭದಲ್ಲಿ ಆಸ್ಪತ್ರೆಗಳಲ್ಲಿ ಎಲ್ಲ ಕೊರೊನಾ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಸಂಖ್ಯೆ ಸಹ ಕಡಿಮೆಯಿತ್ತು. ಈ ಕಾರಣದಿಂದ ರೋಗಿಗಳು ಮೃತಪಟ್ಟಿದರು. ಈ ವರದಿ ಬರಲು ತಡವಾಗಿತ್ತು ಎಂದು ಚೀನಾ ಗ್ಲೋಬಲ್ ಟಿಲಿವಿಷನ್ ನೆಟವರ್ಕ್(ಸಿಜಿಟಿಎನ್) ವರದಿ ಮಾಡಿದೆ.
ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವುಹಾನ್ ನಗರದಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದಕ್ಕೆ ಅನುಮಾನ ವ್ಯಕ್ತಪಡಿಸಿದ್ದರು. ಚೀನಾದಲ್ಲಿ 3 ಸಾವಿರ ಸಾವು ಸಂಭವಿಸಿದೆ ಎಂಉ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು.