ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಈ ಮಧ್ಯೆ ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶಿಯ ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ನಿಯಮವನ್ನು ಜಾರಿ ತಂದಿದೆ.
ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಎಲ್ಲಾ ಸಂಬಂಧಿತ ವಿಮಾನಗಳಲ್ಲಿ ಈ ಆದೇಶಗಳನ್ನು ಇಂದಿನಿಂದಲೇ ಜಾರಿಗೊಳಿಸಬೇಕು. ದೇಶೀಯ ವಿಮಾನ ಪ್ರಯಾಣದಲ್ಲಿ ಇತರ ಕೊರೊನಾ ಮಾರ್ಗಸೂಚಿಗಳು ಮೊದಲಿನಿಂತೆ ಇದೆ ಎಂದು ತಿಳಿಸಿದೆ.
Advertisement
Advertisement
ಪಾಕಿಸ್ತಾನದಲ್ಲಿ ಸತತ ಎರಡು ದಿನಗಳಿಂದ 400ಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿ ಆಗುತ್ತಿವೆ. ಕರಾಚಿಯ ಪಾಸಿಟಿವಿಟಿ ದರವು ಶೇ. 21.71 ದಾಖಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಪ್ರಕರಣವಾಗಿದೆ. ಇದನ್ನೂ ಓದಿ: ದಲಿತರು ಯಾಕೆ ಸಿಎಂ ಆಗಬಾರದು – ಡಿ.ಕೆ.ಶಿವಕುಮಾರ್ ಪ್ರಶ್ನೆ
Advertisement
Advertisement
ಕಳೆದ 24 ಗಂಟೆಗಳಲ್ಲಿ ಒಟ್ಟು 14,437 ಪರೀಕ್ಷೆಗಳನ್ನು ನಡೆಸಲಾಗಿದೆ. ಸಕಾರಾತ್ಮಕತೆಯ ದರವು 2.81 ಪಿಸಿ ಎಂದು ದಾಖಲಾಗಿದ್ದರೆ, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿಯವರು ಇಲ್ಲಿನ ಹಣ ತಗೊಂಡು ಹೋಗಿ ಅಲ್ಲಿ ಕೊಡ್ತಾರೆ: ಸಿ.ಎಂ.ಇಬ್ರಾಹಿಂ ಕಿಡಿ