ಮಾಸ್ಕೋ: ರಷ್ಯಾದಲ್ಲಿ ಕೊರೋನಾ ಹಾವಳಿ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ನಂತರವೂ ಸಾಂಕ್ರಾಮಿಕ ಹೆಚ್ಚು ಹರಡಿದ್ದಲ್ಲಿ ಲಾಕ್‍ಡೌನ್ ಮಾಡಲು ಸರ್ಕಾರ ಚಿಂತಿಸಿದೆ.
Advertisement
ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 37,390 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಅಲ್ಲದೇ ಕೋವಿಡ್‍ನಿಂದ ಒಂದೇ ದಿನ 1069 ಮಂದಿ ಮೃತಪಟ್ಟಿದ್ದು, ಇದು ಈವರೆಗಿನ ದಾಖಲೆಯಾಗಿದೆ. ಇದನ್ನೂ ಓದಿ: ಕೋವಿಡ್‍ನಿಂದ ಭಾರತೀಯರ ಆಯಸ್ಸು 2 ವರ್ಷ ಇಳಿಕೆ
Advertisement
ಕೊರೊನಾ ಹಾವಳಿ ತಡೆಗಟ್ಟಲು ರಷ್ಯಾ ಸರ್ಕಾರ ಮುಂದಾಗಿದ್ದು, ವಾಣಿಜ್ಯ-ವಹಿವಾಟು ಸ್ಥಗಿತಗೊಳಿಸಿದೆ. ಪ್ರಕರಣಗಳು ಹೆಚ್ಚಿರುವ ನಗರವಾದ ಸಂತ ಪೀಟರ್ಸ್‍ಬರ್ಗ್ ನಗರದಲ್ಲಿ ರೆಸ್ಟೋರೆಂಟ್, ಕೆಫೆಗಳು, ವಾಣಿಜ್ಯೇತರ ಮಳಿಗೆಗಳನ್ನು ಅ.30ರಿಂದ ನ.7ರವರೆಗೆ ಬಂದ್ ಮಾಡಿ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಯಾರೂ ಕೆಲಸಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ.
Advertisement
Advertisement
ಬ್ಯೂಟಿ ಸಲೂನ್, ಸ್ಪೋರ್ಟ್ ಸೆಂಟರ್, ಜಿಮ್ ಮತ್ತು ಸಮೂಹ ಸಾರಿಗೆ ಹಾಗೂ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಔಷಧ ಮಳಿಗೆಗಳು, ಗ್ಯಾಸ್ ಸ್ಟೇಷನ್, ದಿನಸಿ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಲಾಗಿದೆ. ಪಶುವೈದ್ಯಕೀಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 290 ಪಾಸಿಟಿವ್, 10 ಸಾವು
ವಾರಾಂತ್ಯ ರಜೆ ದಿನಗಳಲ್ಲಿ ಸ್ವಿಮ್ಮಿಂಗ್ ಪೂಲ್, ಉದ್ಯಾನಗಳು, ಮನರಂಜನಾ ಕಾರ್ಯಕ್ರಮಗಳಿಗಳಿಗೂ ನಿರ್ಬಂಧ ವಿಧಿಸಲಾಗಿದೆ. ನಾಗರಿಕ ಸೇವಾ ಕೇಂದ್ರಗಳೂ ತಮ್ಮ ಕಾರ್ಯಗಳನ್ನು ಸ್ಥಗಿತಗೊಳಿಸಿವೆ.