Advertisements

ಬೆಂಗಳೂರು: ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾಗಬಹುದು ಎಂದು ಭಾರತೀಯ ವೈದ್ಯ ಸಂಸ್ಥೆ (ಐಎಂಎ) ಎಚ್ಚರಿಕೆ ನೀಡಿದೆ.
Advertisements
ಮೂರನೇ ಅಲೆಯಲ್ಲಿ ಹೆಚ್ಚು ಜನ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಈ ತಕ್ಷಣವೇ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಓಮಿಕ್ರಾನ್‍ನಿಂದಲೇ ಮೂರನೇ ಅಲೆ ಸೃಷ್ಟಿಯಾಗಬಹುದು ಎಂದು ಒಮಿಕ್ರಾನ್ ಭೀತಿಯ ನಡುವೆ ಐಎಂಎ ಎಚ್ಚರಿಕೆಯೊಂದನ್ನು ನೀಡಿದೆ.
Advertisements
ಸರ್ಕಾರಕ್ಕೆ ಐಎಂಎ ಸಲಹೆಗಳೇನು..?
ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಅತಿ ಬೇಗ ಹೆಚ್ಚುವರಿ ಡೋಸ್ ನೀಡಿ. ಕಡಿಮೆ ಪ್ರತಿಕಾಯ ಶಕ್ತಿ ಇರುವವರಿಗೆ ಹೆಚ್ಚುವರಿ ಡೋಸ್ ನೀಡಿ. 12- 18 ವರ್ಷದ ಮಕ್ಕಳ ಲಸಿಕೆಗೆ ವೇಗ ನೀಡಿ. ಸಾರ್ವಜನಿಕ ದೊಡ್ಡ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿ. ಎಲ್ಲೆಡೆ ಮಾಸ್ಕ್ ಕಡ್ಡಾಯಗೊಳಿಸಿ ಎಂದು ಸರ್ಕಾರಕ್ಕೆ ಐಎಂಎ ಸಲಹೆಗಳನ್ನು ನೀಡಿದೆ.
Advertisements
Advertisements