ನವದೆಹಲಿ: ಕೊರೊನಾ ರೂಪಾಂತರ ವೈರಸ್‍ಗಳಾದ ಡೆಲ್ಟಾ, ಓಮಿಕ್ರಾನ್ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಭಾರತ್ ಬಯೋಟೆಕ್ ನಡೆಸಿದ ಜಂಟಿ ಅಧ್ಯಯನದ ವರದಿ ತಿಳಿಸಿದೆ.
ಕೋವಿಡ್-19 ಡೆಲ್ಟಾ ಮತ್ತು ಓಮಿಕ್ರಾನ್ ಬಿಎ.1.1, ಬಿಎ.2 ಸೇರಿದಂತೆ ಕೊರೊನಾ ವೈರಸ್‍ನ ವಿವಿಧ ರೂಪಾಂತರಗಳ ವಿರುದ್ಧ ಕೋವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ಪರಿಣಾಮಕಾರಿ ಬಗ್ಗೆ ICMR ಮತ್ತು ಭಾರತ್ ಬಯೋಟೆಕ್ ಅಧ್ಯಯನ ನಡೆಸಿತ್ತು. ಸಿರಿಯನ್ ಹ್ಯಾಮ್‍ಸ್ಟರ್ ಮಾದರಿಯಲ್ಲಿ ನಡೆದ ಅಧ್ಯಯನದಲ್ಲಿ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆದ ಬಳಿಕ ವೈರಸ್ ಸಂಖ್ಯೆಯಲ್ಲಿ ಕಡಿತ, ಶ್ವಾಸಕೋಶದ ಕಾಯಿಲೆಯ ತೀವ್ರತೆ, ವೈರಸ್ ಸಾಮರ್ಥ್ಯ, ಈ ಎಲ್ಲ ಅಂಶಗಳನ್ನು ಗಮನಿಸಲಾಗಿತ್ತು. ಈ ವೇಳೆ ಕೋವ್ಯಾಕ್ಸಿನ್ ಬೂಸ್ಟರ್ ಡೊಸ್ ಪರಿಣಾಮಕಾರಿ ಎಂಬ ಅಂಶ ವರದಿಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ತೀವ್ರ – ರಸ್ತೆಗಳಲ್ಲಿ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ
- Advertisement
- Advertisement
ಬೂಸ್ಟರ್ ಡೋಸ್ ಡೆಲ್ಟಾ ವೇರಿಯಂಟ್‍ಗಳ ವಿರುದ್ಧ ಪರಿಣಾಮಕಾರಿತ್ವ ಹೊಂದಿದ್ದು, ಕೊರೊನಾ ರೂಪಾಂತರಗಳಾದ ಓಮಿಕ್ರಾನ್ ಬಿಎ.1.1 ಮತ್ತು ಬಿಎ.2 ವಿರುದ್ಧ ಹೋರಾಡುತ್ತದೆ. ಸ್ವಾಭಾವಿಕ ಸೋಂಕು ಮತ್ತು ರೋಗನಿರೋಧಕ ಶಕ್ತಿಯ ಕುರಿತು ಅಧ್ಯಯನದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿತ್ತು. ಲಸಿಕೆ ಪರಿಣಾಮಕಾರಿತ್ವವು ಸೋಂಕಿನ ರೂಪಾಂತರದೊಂದಿಗೆ ಬದಲಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯತ್ತ ಮುಖಮಾಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 8,822 ಕೊರೊನಾ ಪ್ರಕರಣ ವರದಿಯಾಗಿದೆ. ಅಲ್ಲದೇ ಪ್ರಸ್ತುತ ದೇಶದಲ್ಲಿ 53,637 ಸಕ್ರಿಯ ಪ್ರಕರಣಗಳಿವೆ.