ಉಡುಪಿ: ಪೆರೋಲ್ ಮೇಲೆ ಬಿಡುಗಡೆಯಾಗಿರುವ ಭೂಗತ ಪಾತಕಿ ಬನ್ನಂಜೆ ರಾಜಾ (Bannanje Raja) ಉಡುಪಿಗೆ (Udupi) ಆಗಮಿಸಿದ್ದಾನೆ.
ತಂದೆ ಸುಂದರ ಶೆಟ್ಟಿಗಾರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಬೇಕೆಂದು ಬನ್ನಂಜೆ, ಹೈಕೋರ್ಟ್‌ಗೆ ಪೆರೋಲ್ ಅರ್ಜಿ ಸಲ್ಲಿಸಿದ್ದ. ಕೋಟ್ ಪೆರೋಲ್ ನೀಡಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಬನ್ನಂಜೆ ರಾಜಾನನ್ನು ಉಡುಪಿಗೆ ಕರೆತರಲಾಗಿದೆ. ಅಂತ್ಯಸಂಸ್ಕಾರ ಮತ್ತು ಅಪರಕ್ರಿಯೆಯಲ್ಲಿ ನಡೆಸಲಿದ್ದಾನೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್
ಬನ್ನಂಜೆ ರಾಜಾ ಒಟ್ಟು 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಈತನನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿರಿಸಲಾಗಿದೆ.
ಈ ಕುರಿತು ಮಾತನಾಡಿರುವ ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್, ಇತ್ತೀಚೆಗೆ ಬನ್ನಂಜೆ ರಾಜಾನ ತಂದೆ ಮೃತಪಟ್ಟಿದ್ದಾರೆ. ಬೆಳಗಾವಿ ಜೈಲಿನಿಂದ ಹೈಕೋರ್ಟಿಗೆ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಪೆರೋಲ್ ನೀಡಿದೆ. ಮೇ 3 ರಿಂ 14ನೇ ತಾರೀಖಿನವರೆಗೆ ಪೆರೋಲ್ ರಜೆ ನೀಡಲಾಗಿದೆ. ಸಹಚರರ ಜೊತೆ ಯಾವುದೇ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಮೊಬೈಲ್, ಇಂಟರ್ನೆಟ್ ಬಳಸುವಂತಿಲ್ಲ. ಮನೆಯನ್ನು ಬಿಟ್ಟು ಹೊರಗೆ ಬರುವಂತಿಲ್ಲ. ಬನ್ನಂಜೆ ರಾಜಾ ಅಂತ್ಯಸಂಸ್ಕಾರದಲ್ಲಿ ಮಾತ್ರ ಭಾಗಿಯಾಗಬೇಕು ಎಂದು ಷರತ್ತು ವಿಧಿಸಲಾಗಿದೆ. ಮೇ 14 ರಂದು ಮತ್ತೆ ಬೆಳಗಾವಿಗೆ ಆತನನ್ನು ಶಿಫ್ಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಮೇಲೂ ಐದು ಕೇಸ್‌ಗಳಿವೆ.. ಅದ್ಕೆ ಅವರ ಮನೆಗೆ ನಾವು ಭೇಟಿ ಕೊಟ್ಟಿಲ್ಲ: ಪರಮೇಶ್ವರ್