ನವದೆಹಲಿ: ದೇಶದ ಭದ್ರತೆಯ ದೃಷ್ಟಿಯಿಂದ ಅಂಚೆ ಕಚೇರಿಗೆ (Post Office) ಬರುವ ಪತ್ರಗಳನ್ನು (Letters) ಯಾವುದೇ ಸರ್ಕಾರಿ ಅಧಿಕಾರಿಗಳು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರ ನೀಡುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ.
ಪತ್ರಗಳು ಮಾತ್ರವಲ್ಲದೇ ಖಾಸಗಿ ಕೊರಿಯರ್‌ಗಳನ್ನೂ (Courier) ಇದೇ ಮೊದಲ ಬಾರಿಗೆ ಮಸೂದೆ ವ್ಯಾಪ್ತಿಗೆ ತರಲಾಗಿದೆ. ಇದರ ಪ್ರಕಾರ ಕೊರಿಯರ್ ಅಂಗಡಿಗೆ ಬರುವ ಶಾಂಕಾಸ್ಪದ ಪತ್ರಗಳನ್ನು ಅಥವಾ ಯಾವುದೇ ವಸ್ತುಗಳನ್ನು ತೆರೆದು ನೋಡಿ ಮುಟ್ಟುಗೋಲು ಹಾಕುವ ಅಧಿಕಾರ ಇದೀಗ ಸರ್ಕಾರಕ್ಕೆ ಲಭಿಸಿದೆ.
Advertisement
Advertisement
ಈ ಮಸೂದೆಗೆ ರಾಜ್ಯಸಭೆಯಲ್ಲಿ ಡಿಸೆಂಬರ್ 4 ರಂದೇ ಅಂಗೀಕಾರ ದೊರೆತಿದೆ. ಸಂಸತ್‌ನಲ್ಲಿ ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಉತ್ತರ ನೀಡಬೇಕು ಎಂದು ವಿಪಕ್ಷಗಳು ಗದ್ದಲ ನಡೆಸಿದ ಸಂದರ್ಭದಲ್ಲಿಯೇ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಹೊಸ ಕಾಯ್ದೆ 125 ವರ್ಷಗಳಷ್ಟು ಹಳೆಯ ಪೋಸ್ಟಾಫೀಸ್ ಕಾಯ್ದೆಯನ್ನು (1898) ಬದಲಿಸಿದೆ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್ ಸ್ಲಿಪ್ ಮತದಾರರ ಕೈಗೆ ನೀಡಬೇಕು
Advertisement
Advertisement
ಈ ಮಸೂದೆಯಿಂದಾಗಿ ಸರ್ಕಾರಿ ಅಧಿಕಾರಿಗಳಿಗೆ ಅಂಚೆ ಕಚೇರಿ ಹಾಗೂ ಖಾಸಗಿ ಕೊರಿಯರ್ ಕಚೇರಿಗೆ ಬರುವ ಪತ್ರಗಳನ್ನು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು