– ಪತ್ನಿ ಹಿಂದಿರುಗಿದಾಗ ಮನೆಗೆ ಸೇರಿಸಿರಲಿಲ್ಲ ಪತಿ
ಗಾಂಧಿನಗರ: ವಧುವಿನ ತಾಯಿ ಜೊತೆ ವರನ ತಂದೆ ಪರಾರಿಯಾಗಿ 16 ದಿನಗಳ ನಂತರ ಮನೆಗೆ ಹಿಂದಿರುಗುವ ಮೂಲಕ ಸುದ್ದಿ ಆಗಿತ್ತು. ಇದೀಗ ಮತ್ತೆ ಆ ಜೋಡಿ ಎಸ್ಕೇಪ್ ಆಗಿ ಮತ್ತೆ ಸುದ್ದಿ ಆಗುತ್ತಿದೆ.
ಮಕ್ಕಳ ಮದುವೆಗೆ ಸ್ವಲ್ಪ ದಿನ ಇರುವಾಗಲೇ ಗಣೇಶ್ (ಹೆಸರು ಬದಲಾಯಿಸಲಾಗಿದೆ) ಹಾಗೂ ವೈಜಯಂತಿ (ಹೆಸರು ಬದಲಾಯಿಸಲಾಗಿದೆ) ಪರಾರಿಯಾಗಿದ್ದರು. ಅದಾದ ಬಳಿಕ ಇಬ್ಬರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಆದರೆ ಇದೀಗ ಮತ್ತೆ ಅಂದರೆ ಭಾನುವಾರ ಈ ಜೋಡಿ ಎಸ್ಕೇಪ್ ಆಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ವಧುವಿನ ತಾಯಿಯ ಜೊತೆ ವರನ ತಂದೆ ಪರಾರಿ- ಯುವ ಪ್ರೇಮಿಗಳ ಮದುವೆ ರದ್ದು
ಫೆಬ್ರವರಿಯಲ್ಲಿ ಗಣೇಶ್ ಅವರ ಮಗ ವೈಜಯಂತಿ ಅವರ ಮಗಳನ್ನು ಮದುವೆ ಆಗಬೇಕಿತ್ತು. ಆದರೆ ಜನವರಿ 10ರಂದು ಗಣೇಶ್ ಹಾಗೂ ವೈಜಯಂತಿ ಕಾಣೆಯಾಗಿದ್ದರು. ಜನವರಿ 26ರಂದು ಇವರಿಬ್ಬರು ತಮ್ಮ ತಮ್ಮ ಮನೆ ಸೇರಿದ್ದರು. 16 ದಿನಗಳ ಕಾಲ ಇಬ್ಬರು ಮಧ್ಯ ಪ್ರದೇಶದ ಉಜ್ಜೈನ್‍ನಲ್ಲಿದ್ದರು. ಇದೀಗ ಇಬ್ಬರು ಮತ್ತೆ ಕಾಣೆಯಾಗಿದ್ದು, ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ವಧುವಿನ ತಾಯಿ ಜೊತೆ ವರನ ತಂದೆ ಪರಾರಿ – 16 ದಿನಗಳ ನಂತ್ರ ಮನೆಗೆ ಮರಳಿದ ಜೋಡಿ
ನಡೆದಿದ್ದೇನು?
ಗಣೇಶ್ ಮತ್ತು ವೈಜಯಂತಿ ಯುವಕರಾಗಿದ್ದಾಗ ಪ್ರೀತಿಸುತ್ತಿದ್ದರು. ಆದರೆ ಕಾರಣಾಂತರದಿಂದ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು. ಈಗ ಅವರ ಮಕ್ಕಳಿಂದ ಗಣೇಶ್ ಮತ್ತು ವೈಜಯಂತಿ ಮತ್ತೆ ಭೇಟಿಯಾಗಿದ್ದರು. ಮಕ್ಕಳ ಮದುವೆ ಓಡಾಟದ ಸಮಯದಲ್ಲಿ ಮತ್ತೆ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿತು. ಬಳಿಕ ಮಕ್ಕಳಿಗೆ ಗೊತ್ತಾಗದಂತೆ ಓಡಿ ಹೋಗಿದ್ದರು. ಈ ವೇಳೆ ಗಣೇಶ್ ಹಾಗೂ ವೈಜಯಂತಿ ಮೊದಲಿನಿಂದಲೂ ಪರಿಚಿತರಾಗಿದ್ದರು. ಇವರಿಬ್ಬರು ಕಾಣೆಯಾದ ನಂತರ ಈ ಹಿಂದೆ ಸಂಬಂಧದಲ್ಲಿದ್ದರು ಎಂದು ಅವರ ಸ್ನೇಹಿತರು ಬಹಿರಂಗಪಡಿಸಿದರು ಎಂದು ಗಣೇಶ್ ಹಾಗೂ ವೈಜಯಂತಿ ಸಂಬಂಧಿಕರು ತಿಳಿಸಿದ್ದರು.
ಓಡಿ ಹೋಗಿ 16 ದಿನಗಳ ನಂತರ ಮನೆಗೆ ಹಿಂದಿರುಗಿದ್ದ ವೈಜಯಂತಿಯನ್ನು ಆಕೆಯ ಪತಿ ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಹಾಗಾಗಿ ವೈಜಯಂತಿ ತನ್ನ ತವರು ಮನೆಗೆ ಹೋಗಿದ್ದಳು. ಶನಿವಾರ ಇಬ್ಬರು ಮತ್ತೆ ಪರಾರಿಯಾಗಿದ್ದು, ಕುಟುಂಬಸ್ಥರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.