Connect with us

Latest

ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

Published

on

ಗಾಂಧಿನಗರ: ಗುಜರಾತಿನ ನವಜೋಡಿಯೊಂದು ತಮ್ಮ ಮದುವೆ ಮೆರವಣಿಗೆ ವೇಳೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ಮದುವೆಯಾಗಿ ಕೇವಲ ಒಂದು ಗಂಟೆ ಸಮಯವಾಗಿದೆ ಅಷ್ಟೇ, ಆದ್ರೆ ತಮ್ಮ ಮದುವೆ ಸಂಭ್ರಮವನ್ನು ಆಚರಿಸುವ ಬದಲಾಗಿ ತಮ್ಮ ಮದುವೆ ಮೆರವಣಿಗೆ ವೇಳೆ ಹುತಾತ್ಮ ಯೋಧರ ಭಾವಚಿತ್ರವನ್ನು ಹಿಡಿದು ಗೌರವ ಸಲ್ಲಿಸಿದ್ದಾರೆ. ನವಜೋಡಿಗಳ ಈ ನಿರ್ಧಾರಕ್ಕೆ ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಕೂಡ ಸಾಥ್ ಕೊಟ್ಟು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

ಮೆರವಣಿಗೆಯ ಉದ್ದಕ್ಕೂ ಯೋಧರಿಗೆ ಜೈಕಾರ ಹಾಕುತ್ತ ಉಗ್ರರ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಾಷ್ಟ್ರ ಧ್ವಜವನ್ನು ಹಿಡಿದು ಭಾರತದಲ್ಲಿ ಕೇವಲ 1427 ಹುಲಿಗಳಿಲ್ಲ, ಗಡಿಯಲ್ಲಿ 13 ಲಕ್ಷ ಹುಲಿಗಳು ದೇಶ ಕಾಯುತ್ತಿದ್ದಾರೆ ಎಂದು ಸಂದೇಶ ಸಾರಿದ್ದಾರೆ.

ಕುದುರೆ ರಥದಲ್ಲಿ ನವಜೋಡಿಗಳು ಸಾಗುತ್ತಿದ್ದರೆ, ಅವರ ಮುಂದೆ ನೂರಾರು ಮಂದಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಧ್ವಜವನ್ನು ಹಿಡಿದು ಯೋಧರಿಗೆ ಜೈಕಾರ ಹಾಕಿದರೆ ಇನ್ನು ಕೆಲವರು ಸೈನಿಕರ ವೇಷಭೂಷಣ ಧರಿಸಿ ಮೆರೆವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *