ಲಕ್ನೋ: ಓಯೋ (OYO) ಹೋಟೆಲ್ ರೂಮ್‍ಗಳಲ್ಲಿ ಸಿಕ್ರೇಟ್ ಕ್ಯಾಮೆರಾ ಅಳವಡಿಸುವ ಮೂಲಕ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿದ ಆರೋಪದಡಿ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida)ನಡೆದಿದೆ.
Advertisement
ಓಯೋ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿ, ಕೇಳಿದಷ್ಟು ಹಣ ನೀಡದಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡುವುದಾಗಿ ಖದೀಮರ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಆದರೆ ಈ ದಂಧೆಯಲ್ಲಿ ಹೋಟೆಲ್ ಸಿಬ್ಬಂದಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೇದಿಕೆ ಮೇಲೆಯೇ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ – ಪುರಸಭೆ ಕಾರ್ಯಕರ್ತ ಅಮಾನತು
Advertisement
Advertisement
ಕಿಡಿಗೇಡಿಗಳ ಗ್ಯಾಂಗ್ ಮೊದಲಿಗೆ ಓಯೋ ರೂಮ್ ಅನ್ನು ತಮಗೆಂದು ಬುಕ್ ಮಾಡಿಕೊಂಡು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕೆಲವು ದಿನಗಳ ನಂತರ ಅಳವಡಿಸಿದ್ದ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಾರೆ. ನಂತರ ಜೋಡಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ
Advertisement
ಆರೋಪಿಗಳನ್ನು ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ನೋಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ವಿಭಿನ್ನ ಗ್ಯಾಂಗ್‍ನ ಸದಸ್ಯರಾಗಿದ್ದಾರೆ. ಈ ಗ್ಯಾಂಗ್ ಅನಧಿಕೃತ ಕಾಲ್ ಸೆಂಟರ್‌ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್ ಒದಗಿಸುವುದು ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಡಿಗಳ ಖಾಸಗಿ ವೀಡಿಯೋವನ್ನು ಅವರ ಫೋನ್‍ಗೆ ಕಳುಹಿಸಿ ವಿಷ್ಣು ಮತ್ತು ಅಬ್ದುಲ್ ವಹಾವ್ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಆದರೆ ಹಣ ನೀಡಲು ನಿರಾಕರಿಸದರೆ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಅನುರಾಗ್ ಕುಮಾರ್ ಸಿಂಗ್ ಹಾಗೂ ಪಂಕಜ್ ಹಣ ಸುಲಿಗೆ ಮಾಡಲು ನೋಂದಾಯಿತ ಸಿಮ್ ಮತ್ತು ಇತರ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾದ ಖಾತೆಯನ್ನು ಒದಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಸಾದ್ ಮಿಯಾನ್ ಖಾನ್ ಹೇಳಿದ್ದಾರೆ.
ಇದೀಗ ಆರೋಪಿಗಳಿಂದ ಪೊಲೀಸರು 11 ಲ್ಯಾಪ್‍ಟಾಪ್‍ಗಳು, 7 ಸಿಪಿಯುಗಳು, 21 ಮೊಬೈಲ್‍ಗಳು ಮತ್ತು ವಿವಿಧ ಬ್ಯಾಂಕ್‍ಗಳ 22 ಎಟಿಎಂ ಕಾರ್ಡ್‍ಗಳು, ಒಂದು ಪ್ಯಾನ್ ಕಾರ್ಡ್, ಒಂದು ಆಧಾರ್ ಕಾರ್ಡ್, 14 ನಕಲಿ ಐ ಫಾರ್ಮಾ ಮತ್ತು ಐ ಕಾರ್ಡ್, ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.