ಪಾಟ್ನಾ: ತಾಯಿಯ (Mother) ಕೊನೆಯ ಆಸೆ ಪೂರೈಸಲು ಮಗಳೊಬ್ಬಳು ತನ್ನ ಮದುವೆಯನ್ನು (Marriage) ಖಾಸಗಿ ಆಸ್ಪತ್ರೆಯ (Hospital) ಐಸಿಯುನಲ್ಲಿ (ICU) ಆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ.
ಬಿಹಾರದ (Bihar) ಗಯಾ ನಿವಾಸಿ ಪೂನಂ ಮಗಧ್ ಎಂಬಾಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಯಾದ ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು ಎಂದು ವೈದ್ಯರು ಕುಟುಂಬ ಸದಸ್ಯರಿಗೆ ಸೂಚಿಸಿದ್ದರು.
Advertisement
मरती मां की ख्वाहिश देख ICU में हुई बेटी की शादी #Bihar #ICU pic.twitter.com/vpxDbcJbnr
— Aman Kumar Dube (@Aman_Journo) December 26, 2022
Advertisement
ಆದರೆ ಪೂನಂಗೆ ತನ್ನ ಮಗಳ ಮದುವೆಯನ್ನು ನೋಡಬೇಕು ಎಂಬ ಆಸೆಯಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಮಗಳು ಚಾಂದಿನಿ(26) ಬಳಿ ಹೇಳಿಕೊಂಡಿದ್ದಾಳೆ. ತನ್ನ ತಾಯಿಯ ಕೊನೆಯ ಆಸೆಯನ್ನು ಅರಿತ ಚಾಂದಿನಿ ಅದನ್ನು ನೆರವೆರಿಸಲು ಸಿದ್ಧವಾಗಿದ್ದಾಳೆ.
Advertisement
ಚಾಂದಿನಿಗೆ ಈ ಮೊದಲೇ ಸೇಲಂಪುರ ಗ್ರಾಮದ ನಿವಾಸಿ ಸುಮಿತ್ ಗೌರವ್ (28) ನೊಂದಿಗೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಇಬ್ಬರ ನಿಶ್ಚಿತಾರ್ಥ ಸಮಾರಂಭಕ್ಕೆ ಡಿ. 26 ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಪೂನಂ ತನ್ನ ಕೊನೆಯ ಆಸೆಯನ್ನು ಹೇಳಿದಾಗ ಚಾಂದಿನಿ ಆ ವಿಷಯವನ್ನು ಸುಮಿತ್ ಕುಟುಂಬ ಸದಸ್ಯರಿಗೆ ತಿಳಿಸಿದಳು. ಇದಾದ ನಂತರ ಎರಡು ಕುಟುಂಬಗಳ ಪರಸ್ಪರ ಒಪ್ಪಿಗೆ ಮೇರೆಗೆ ಪೂನಂ ಅವರ ಕೊನೆಯ ಆಸೆಯನ್ನು ಈಡೇರಿಸಲು ಆಸ್ಪತ್ರೆಯಲ್ಲಿಯೇ ಮದುವೆಯನ್ನು ಏರ್ಪಡಿಸಲು ನಿರ್ಧರಿಸಿದರು. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್
Advertisement
ಅದರ ನಂತರ, ಸುಮಿತ್ ಗೌರವ್ ಮತ್ತು ಚಾಂದಿನಿ ಆಸ್ಪತ್ರೆಯ ಐಸಿಯುನಲ್ಲಿ ವಿವಾಹವಾದರು. ಅಲ್ಲಿ ಯಾವುದೇ ಅಲಂಕಾರಗಳಿಲ್ಲದೆ ವಧು-ವರರು ಪರಸ್ಪರ ಹಾರ ಹಾಕಿದರು. ಈ ವೇಳೆ ಎರಡೂ ಕಡೆಯಿಂದ ಎರಡರಿಂದ ನಾಲ್ಕು ಮಂದಿ ಹಾಜರಿದ್ದರು. ಈ ವೇಳೆ ವಧು-ವರರು ತಾಯಿ ಪೂನಂ ಕುಮಾರಿ ವರ್ಮಾ ಅವರಿಂದ ಆಶೀರ್ವಾದ ಪಡೆದರು. ಆದರೆ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕೋಟ್ಯಧಿಪತಿಗಳು ಶಾಸಕರಾಗೋಕೆ ಆಗಿದ್ಯಾ, ಆದ್ರೆ ನಾನಾಗಿದ್ದೇನೆ- ರೇಣುಕಾಚಾರ್ಯ