ಶಿಮ್ಲಾ: ಚಚಂಬಾ ಜಿಲ್ಲೆಯಲ್ಲಿ ಹಠಾತ್ ಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು ದುಪ್ಪಟ್ಟಾವನ್ನು ಹಗ್ಗದಂತೆ ಬಳಸಿ ಕುಟುಂಬವೊಂದು ಸುರಕ್ಷಿತವಾಗಿ ರಕ್ಷಿಸಿದೆ.
ಭತಿಯತ್‌ನ ಭರ್ಮಲಾ ಪ್ರದೇಶದ ಕಾಕಿಯಾರಾ-ತುನುಹಟ್ಟಿ ರಸ್ತೆಯಲ್ಲಿ ನಡೆದಿದ್ದು, ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯು ಹಠಾತ್ ಜಲಾವೃತಗೊಂಡು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ಘಟಾಶ್ನಿಯ ಮಾಮ್ಲಾ ಗ್ರಾಮದ ಬೈಕ್ ಸವಾರನೋರ್ವ ನೀರಿನ ಮಧ್ಯೆ ಸಿಲುಕಿ ಪರದಾಡುತ್ತಿದ್ದರು. ಇದನ್ನೂ ಓದಿ: ಸೂಪರ್ ಪವರ್ ನಾಯಕನಂತೆ ಬಿಂಬಿಸಲು ಹೋಗಿ ಜಗತ್ತಿನ ಮುಂದೆ ಬೆತ್ತಲಾದ ಪಾಕ್ ಪಿಎಂ!
Chamba – A family travelling in their vehicle rescued a biker who was struggling for his life after getting stuck at the edge of a road in Chamba district.The incident was captured on video and is reportedly from the Banikhet side. The biker was seen trapped with his motorcycle… pic.twitter.com/m3H6AV24s3
— NextMinute News (@nextminutenews7) September 1, 2026
ಇದೇ ವೇಳೆ ಅದೇ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಬೈಕ್ ಸವಾರನ ಪರಿಸ್ಥಿತಿ ಕಂಡು ವಾಹನ ನಿಲ್ಲಿಸಿದ್ದಾರೆ. ಕೂಡಲೇ ನವದಂಪತಿ ಸಹಾಯಕ್ಕೆ ಧಾವಿಸಿದ್ದು, ನವವರ ತನ್ನ ಪತ್ನಿ ಬಳಿಯಿದ್ದ ದುಪ್ಪಟ್ಟಾವನ್ನು ಹಗ್ಗದಂತೆ ಬಳಸಿ ಬೈಕ್ ಸವಾರನ ಕಡೆಗೆ ಎಸೆದರು. ಬೈಕ್ ಸವಾರ ದುಪ್ಪಟ್ಟಾವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಕುಟುಂಬದ ಸದಸ್ಯರು ತಮ್ಮ ಕಡೆಗೆ ಬಟ್ಟೆಯನ್ನು ಎಳೆದು ರಕ್ಷಿಸಿದರು.
ಪ್ರವಾಹ ಪೀಡಿತ ರಸ್ತೆಯ ಬಳಿ ನಿಂತು ಮಹಿಳೆಯರು ದೂಪಟ್ಟಾದ ಮೂಲಕ ಬೈಕ್ ಸವಾರನನ್ನು ರಕ್ಷಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬದ ಧೈರ್ಯದಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅವರ ಈ ಸಾಹಸ ಕಾರ್ಯವು ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು, ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸಹಾಯ ಮಾಡಲು ತಮ್ಮ ಸ್ವಂತ ಸುರಕ್ಷತೆಯನ್ನು ಪಣಕ್ಕಿಟ್ಟಿದ್ದಕ್ಕಾಗಿ ಅನೇಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.ಇದನ್ನೂ ಓದಿ: ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಗೆದ್ದ ಹೆಬ್ಬಾಳದ ಎನ್‍ಎಫ್‍ಸಿ ಟೀಮ್
