ದಾವಣಗೆರೆ: ಪತಿಯ (Husband) ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿಯೂ (Wife) ಸಾವನ್ನಪ್ಪಿರುವುದು ಚನ್ನಗಿರಿ (Channagiri) ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಸ್ತೂರಿ ರಂಗಪ್ಪ (65) ಜಯಮ್ಮ (58) ಸಾವನ್ನಪ್ಪಿದ ದಂಪತಿ. ಪಡಿತರ ಅಕ್ಕಿ ತರಲು ನ್ಯಾಯಬೆಲೆ ಅಂಗಡಿಗೆ ಕಸ್ತೂರಿ ರಂಗಪ್ಪ ಹೋಗಿದ್ದರು. ಈ ವೇಳೆ ಅವರು ಕುಸಿದು ಬಿದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.
ಕಸ್ತೂರಿ ರಂಗಪ್ಪ ಸಾವನ್ನಪ್ಪಿದ ವಿಚಾರವನ್ನು ಫೋನ್ ಮೂಲಕ ಪತ್ನಿ ಜಯಮ್ಮನಿಗೆ ಕುಟುಂಬಸ್ಥರು ತಿಳಿಸಿದ್ದಾರೆ. ಈ ವಿಚಾರ ಕೇಳಿದ ಕೂಡಲೇ ಅವರು ಸಹ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇಬ್ಬರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.