ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಕುರಕೇನಹಳ್ಳಿ ಗ್ರಾಮದ ದಂಪತಿ ಮೂಢನಂಬಿಕೆಯಾಗಿ ಬಲಿಯಾಗಿ 1 ಗಂಡು ಮಗುವಿಗಾಗಿ ಒಂಭತ್ತು ಹೆಣ್ಣು ಮಕ್ಕಳನ್ನು ಸತತವಾಗಿ ಹೆತ್ತಿದ್ದಾರೆ.
ರಾಮಕೃಷ್ಣಪ್ಪ ಹಾಗೂ ಭಾಗ್ಯಮ್ಮ ಎಂಬವರೇ ಮೂಢನಂಬಿಕೆಗೆ ಬಲಿಯಾದ ದಂಪತಿ. ಈ ದಂಪತಿಗೆ ಜ್ಯೋತಿಷಿಯೊಬ್ಬರು ಗಂಡು ಮಗು ಜನನದಿಂದ ಕಷ್ಟಗಳು ದೂರವಾಗುತ್ತವೆ ಎಂದು ಹೇಳಿದ್ದರಂತೆ. ಹೀಗಾಗಿ ಸುಮಾರು ವರ್ಷಗಳಿಂದ ಗಂಡು ಮಗುವಿಗಾಗಿ ದಂಪತಿ ಪ್ರಯತ್ನಿಸಿದ್ದರು.
Advertisement
9 ಹೆಣ್ಣು ಮಕ್ಕಳ ನಂತರ ರಾಮಕೃಷ್ಣಪ್ಪ ಹಾಗೂ ಭಾಗ್ಯಮ್ಮ ಅವರಿಗೆ ಶುಕ್ರವಾರ ಗಂಡು ಮಗು ಜನನವಾಗಿದೆ.