ಮುಂಬೈ: ಮಗನನ್ನು ಕಳೆದುಕೊಂಡ ನಂತರ ಅವನನ್ನು ಪ್ರತಿನಿತ್ಯ ಸ್ಮರಿಸುತ್ತಾ ಆತನ ಹೆಸರಿನಲ್ಲಿ ಹಿರಿಯ ನಾಗರೀಕರಿಗಾಗಿ ಟಿಫಿನ್ ಸೆಂಟರ್ ನಡೆಸುತ್ತಿರೋ ಈ ಮುಂಬೈ ದಂಪತಿ ಪ್ರತಿನಿತ್ಯ ಬಡವರಿಗೆ ಹಾಗೂ ವೃದ್ಧರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ.
ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಒಂದು ಸ್ಥಳೀಯ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದ ವೇಳೆ ಜನಜಂಗುಳಿಯಿದ್ದ ರೈಲನ್ನು ಏರಿ ಸ್ಥಳದಲ್ಲೇ ಸಾವನ್ನಪ್ಪಿದ್ರು.
Advertisement
Advertisement
ಮಗನ ಸಾವಿನ ನಂತರ ಆತನ ಹೆಸರು ಸದಾ ಕಾಲ ಚಿರಸ್ಮರಣಿಯಾಗಿ ಇರಬೇಕು ಎಂದು ಬಡವರಿಗೆ ಊಟ ಒದಗಿಸುವ ಉದ್ದೇಶದಿಂದ ದಂಪತಿ ಶ್ರೀ ನಿಮೇಶ್ ತನ್ನಾ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು.
Advertisement
ಮೊದಲು ಸಣ್ಣ ಅಡುಗೆ ಮನೆಯಲ್ಲಿ ಊಟವನ್ನು ತಯಾರಿಸಿಕೊಂಡು ಪ್ರತಿನಿತ್ಯ ಸುಮಾರು 30 ಮಂದಿಗೆ ನೀಡುತ್ತಿದ್ದರು. ಈಗ ಟ್ರಸ್ಟ್ ಅಭಿವೃದ್ಧಿಯಾಗಿ ಸುಮಾರು 7 ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಮುಂಬೈನಲ್ಲಿ ಪ್ರತಿದಿನ 100 ಬಡ ಜನರಿಗೆ ಊಟವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕಗಳು ಹಾಗೂ ವೃದ್ಧರಿಗೆ ಔಷಧವನ್ನು ಕೂಡ ನೀಡುತ್ತಿದ್ದಾರೆ.
Advertisement
https://www.youtube.com/watch?v=qG0_SPfmp_U