ಚಿತ್ರದುರ್ಗ: ಕಾನೂನು ಕಾಪಾಡಬೇಕಾದ ಪೊಲೀಸ್ ಠಾಣೆಯಲ್ಲೇ ಅಂತರ್ಜಾತಿ ವಿವಾಹವಾಗಿರೋ ಪ್ರೇಮಿಗಳನ್ನು ಪ್ರತ್ಯೇಕ ಮಾಡುವ ಪ್ರಯತ್ನ ನಡೆದಿದ್ದು, ಪ್ರಾಣ ಬಿಡುತ್ತೇವೆ ಆದರೆ ನಾವು ಬೇರೆಯಾಗಲ್ಲ ಎಂದು ದಂಪತಿ ಪಟ್ಟು ಹಿಡಿದಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗುಡಿಹಳ್ಳಿ ಗ್ರಾಮದ ಗೀತಾ ಹಾಗು ಮಂಜುನಾಥ್ ಎಂಬವರು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಇವರ ವಿವಾಹಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದು, ದಂಪತಿಯನ್ನು ಪ್ರತ್ಯೇಕ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದಂಪತಿ ಪರಶುರಾಂಪುರ ಠಾಣೆ ಪೊಲೀ ಸರ ಮೊರೆ ಹೋಗಿದ್ದಾರೆ.
Advertisement
Advertisement
ಆದ್ರೆ ಠಾಣೆಯ ಆವರಣದಲ್ಲೇ ದಂಪತಿಯನ್ನ ಪ್ರತ್ಯೇಕಗೊಳಿಸಲು ಎರಡು ಕುಟುಂಬಗಳ ಮಧ್ಯ ಸಭೆ ನಡೆದಿದೆ. ಇದರಿಂದ ಆತಂಕಗೊಂಡ ನವದಂಪತಿ ಚಿತ್ರದುರ್ಗದ ಸೂಪರಿಡೆಂಟೆಂಟ್ ಪೊಲೀಸ್ ಶ್ರೀನಾಥ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಕೂಡ ಪ್ರಯೋಜನವಾಗದೇ ಈಗ ನ್ಯಾಯಕ್ಕಾಗಿ ಹಂಬಲಿಸುವಂತಾಗಿದೆ.
Advertisement
ಸಹನಾಯಕ ಸಮುದಾಯದ ಲಕ್ಕಗೊಂಡನಹಳ್ಳಿಯ ಗೀತಾ ಹಾಗು ಗುಡಿಹಳ್ಳಿಯ ಬೋವಿ ಸಮುದಾಯದ ಯುವಕ ಮಂಜುನಾಥ್ ಸುಮಾರು ಒಂದು ವರ್ಷದ ಹಿಂದೆಯೇ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಕೇವಲ ಜಾತಿ ಹಾಗು ಮರ್ಯಾದೆಗಾಗಿ ರಿಜಿಸ್ಟಾರ್ ಆಗಿರೋ ವಿವಾಹವನ್ನು ಮುರಿಯಲು ಹಿರಿಯರು ಯತ್ನಿಸುತ್ತಿದ್ದು, ಇಬ್ಬರಿಗೂ ರಕ್ಷಣೆ ಇಲ್ಲದಂತಾಗಿದೆ.
Advertisement
ಅಷ್ಟೇ ಅಲ್ಲದೇ ಈಗಾಗಲೇ ವಿವಾಹವಾಗಿರೋ ಗೀತಾಗೆ ಮತ್ತೊಂದು ಮದುವೆ ಮಾಡಲು ಮನೆಯವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ಗೀತಾ ಮನೆ ಬಿಟ್ಟು ಬಂದು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಅಲ್ಲೂ ಅವರಿಗೆ ನ್ಯಾಯ ಸಿಗಲಿಲ್ಲ. ಇದರಿಂದ ದಂಪತಿ ಕಂಗಾಲಾಗಿದ್ದು, ಪ್ರಾಣ ಬೇಕಾದರೆ ಬಿಡುತ್ತೇವೆ ನಾವಿಬ್ಬರು ಬೇರೆಯಾಗಲ್ಲ ಅಂತ ಪಟ್ಟು ಹಿಡಿದು ಕುಳಿತಿದ್ದಾರೆ.