– ವಿಶೇಷ ಮದುವೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯದ್ದೇ ಕಾರುಬಾರು
ಲಕ್ನೋ: ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಸಾರ್ವಜನಿಕರು ಸಹ ಈರುಳ್ಳಿ ಬಂಗಾರಕ್ಕಿಂತಲೂ ಬೆಲೆ ಬಾಳುವಂತಹದ್ದು ಎಂದು ಭಾವಿಸಿ ಸಮಾರಂಭಗಳಲ್ಲಿ ಇದರದ್ದೇ ಹಾರ, ಆಭರಣಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
Advertisement
ಈರುಳ್ಳಿ ಬಂಗಾರದಷ್ಟೇ ಅಮೂಲ್ಯವಾದದ್ದು ಎಂದು ಭಾವಿಸಿ, ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮದುವೆ ವೇಳೆ ದಂಪತಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾರಗಳನ್ನೇ ಬದಲಾಯಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಉಡುಗೊರೆ ನೀಡುವವರೂ ಸಹ ಹೂವಿನ ಬೊಕ್ಕೆಗಳನ್ನು ನೀಡುವ ಬದಲು ಈರುಳ್ಳಿ ಬುಟ್ಟಿಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್
Advertisement
Advertisement
ಈರುಳ್ಳಿ ಹಾಗೂ ತರಕಾರಿ ಬೆಲೆ ಹೆಚ್ಚಿರುವುದನ್ನು ಎತ್ತಿ ತೋರಿಸಲು ದಂಪತಿ ಈ ರೀತಿ ಮಾಡಿದ್ದು, ವಿಶೇಷವೆಂದರೆ ಮದುವೆಗೆ ಆಗಮಿಸಿದ ಸಂಬಂಧಿಕರು, ಕುಟುಂಬಸ್ಥರು ಸ್ನೇಹಿತರೂ ಈರುಳ್ಳಿ ಬುಟ್ಟಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
Advertisement
ಕಳೆದ 15 ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೆ ತಲುಪಿದ್ದು, ಹೀಗಾಗಿ ಜನತೆ ಈರುಳ್ಳಿಯನ್ನು ಚಿನ್ನದಷ್ಟೇ ಅಮೂಲ್ಯ ಎಂದು ಪರಿಗಣಿಸಿದ್ದಾರೆ. ಅದೇ ರೀತಿ ಮದುವೆ ಮನೆಗಳಲ್ಲಿ ಸಹ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಆಭರಣಗಳನ್ನೇ ಧರಿಸಿ ಗಮನ ಸೆಳೆಯುತ್ತಿದ್ದಾರೆ. ಈ ದಂಪತಿ ಸಹ ಇದೇ ರೀತಿ ಮಾಡಿದ್ದು, ಹಾರ, ಗಿಫ್ಟ್ ಎಲ್ಲವನ್ನೂ ಈರುಳ್ಳಿ ಮಯವಾಗಿಸಿದ್ದಾರೆ.
ದೇಶದ ಬಹುತೇಕ ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 100-150 ರೂ.ಗೆ ತಲುಪಿದೆ. ಬೆಲೆಯ ಕುರಿತು ತಿಳಿಸಲು ಜನತೆ ವಿವಿಧ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. ಮದುವೆಗೆ ತೆರಳಿದ್ದ ಸ್ನೇಹಿತರು ಈರಳ್ಳಿ ಬಕೆಟ್ ಉಡುಗೊರೆ ನೀಡುವ ಮೂಲಕ ವಿಭಿನ್ನ ಉಡುಗೊರೆ ನೀಡಿದ್ದರು. 2.5 ಕೆ.ಜಿ.ಈರುಳ್ಳಿ ನೀಡುವ ಮೂಲಕ ಮದುವೆಯಲ್ಲಿ ನೆರೆದಿದ್ದ ಜನರ ಗಮನ ಸೆಳೆದಿದ್ದರು. ಅಲ್ಲದೆ ತಮಿಳು ನಾಡಿನಲ್ಲಿ ಇನ್ನೂ ಕೆಲವೆಡೆ ಹಲವು ವ್ಯಾಪಾರಿಗಳು ಸರಕು ಕೊಂಡರೆ 1 ಕೆ.ಜಿ. ಈರುಳ್ಳಿ ಉಚಿತ ಎಂದು ಆಫರ್ ನೀಡಿದ್ದರು.