ತ್ರಿಪುರ ಮೂಲದ ಜೋಡಿ ಬೆಂಗ್ಳೂರಲ್ಲಿ ವಾಸ- ಯುವಕನ ಬಂಧಿಸಿ ಪೊಲೀಸರಿಂದ ವಿಚಾರಣೆ

Public TV
2 Min Read
ANE LOVE JIHAD

ಬೆಂಗಳೂರು: ತ್ರಿಪುರ ಮೂಲದ ಜೋಡಿಯೊಂದು ಅಲ್ಲಿಂದ ಪರಾರಿಯಾಗಿ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಸದ್ಯ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ತ್ರಿಪುರ ಮೂಲದ ಸೋರಾಬ್ ಹುಸೈನ್ ಬಂಧತನಾಗಿದ್ದು, ಈತ ಅಲ್ಲಿನ ಅಪ್ರಾಪ್ತೆಯನ್ನು ಪ್ರೀತಿಸಿ, ಆಕೆಯ ಮನಃ ಪರಿವರ್ತನೆ ಮಾಡಿ ಸುತ್ತಾಡಿ ಬೆಂಗಳೂರಿಗೆ ಕರೆತಂದು ಇಲ್ಲಿಯೇ ವಾಸವಿದ್ದಾನೆ. ಯುವಕ ಮುಸ್ಲಿಂ ಧರ್ಮಕ್ಕೆ ಸೇರಿದವನಾಗಿದ್ದು, ಯುವತಿ ಹಿಂದೂ ಧರ್ಮದವಾಳಾಗಿದ್ದಾಳೆ. ಸದ್ಯ ಇದೀಗ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ.

ಏನಿದು ಪ್ರಕರಣ?:
ಸೋರಾಬ್, ಫೇಸ್‍ಬುಕ್ ಮೂಲಕ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡಿದ್ದನು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿ ಕಳೆದ ಮೂರು ತಿಂಗಳ ಹಿಂದೆ ತ್ರಿಪುರದಿಂದ ಈ ಜೋಡಿ ಪರಾರಿಯಾಗಿ ಚೆನ್ನೈ, ಮತ್ತು ಊಟಿಯಲ್ಲಿ ಸುತ್ತಾಡಿ ವಾರದ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಮಹದೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ನಾರಾಯಣಪುರದ ಶೆಡ್‍ವೊಂದರಲ್ಲಿ ವಾಸವಾಗಿದ್ದರು. ಈ ಹಿಂದೆ ಅಪ್ರಾಪ್ತೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರ ತ್ರಿಪುರದಲ್ಲಿ ನಾಪತ್ತೆ ಪ್ರಕರಣದ ದೂರು ದಾಖಲಿಸಿದ್ದರು. ಈ ಸಂಬಂಧ ತ್ರಿಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದರು. ಅಲ್ಲದೇ ಆಕೆಯ ಫೋನ್ ಕರೆಗಳನ್ನು ಟ್ರ್ಯಾಪ್ ಮಾಡುತ್ತಿದ್ದರು.

love jihad

ಅಪ್ರಾಪ್ತೆ ಕಾಣೆಯಾಗಿರುವ ಬಗ್ಗೆ ಅಲ್ಲಿನ ಸಂಘಟನೆಯೊಂದು ಕೂಡ ಈ ಪ್ರೇಮಿಗಳಿಗೆ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ನಗರದ ಸಂಘಟನೆಯೊಂದಕ್ಕೆ ಇವರ ಸುಳಿವು ದೊರೆತಿದ್ದು, ವಿಳಾಸ ತಿಳಿದುಕೊಂಡ ಸಂಘಟನೆಯ ಸದಸ್ಯರು ಪೊಲೀಸರೊಂದಿಗೆ ತೆರಳಿ ಯುವಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರೂ ಸಹ ದ್ವಂದ್ವ ಹೇಳಿಕೆ ನೀಡುತ್ತಿರುವುದರಿಂದ ಲವ್ ಜಿಹಾದ್ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಈಗಾಗಲೇ ತ್ರಿಪುರ ಪೊಲೀಸರಿಗೆ ಮಾಹಿತಿ ತಲುಪಿದ್ದು, ಆಕೆಯನ್ನು ಕರೆದೊಯ್ಯಲು ತ್ರಿಪುರ ಪೊಲೀಸರು ಆಗಮಿಸುತ್ತಿದ್ದಾರೆ. ಮೂರು ದಿನಗಳ ಹಿಂದೆ ನಮ್ಮ ಸಂಘಟನೆ ತ್ರಿಪುರ ರಾಜ್ಯಾಧ್ಯಕ್ಷರಿಂದ ಕರೆ ಬರುತ್ತೆ, ಅವರು ಈ ಘಟನೆ ಬಗ್ಗೆ ಹೇಳಿದಾಗ ನಾವು ಹುಡುಕಾಟ ನಡೆಸಿದ್ದೆವು. ಆಗ ಕಳೆದ ಒಂದು ವಾರದಿಂದ ಬಿ. ನಾರಾಯಣಪುರದ ಶೆಡ್ ವೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡು ವಾಸವಾಗಿದ್ದು, ಮರಳಿ ಚನ್ನೈಗೆ ಹೋಗಲು ಪ್ಲಾನ್ ಮಾಡಿದ್ದರು. ಕಳೆದ ಮೇ 18ಕ್ಕೆ ಆಕೆಯ ಸಹೋದರ ತ್ರಿಪುರದಲ್ಲಿ ನಾಪತ್ತೆಯ ಪ್ರಕರಣ ದಾಖಲಿಸಿದ್ದರು. ಆಕೆಗೆ 16 ವರ್ಷ ಇರುವುದರಿಂದ ಇದು ಲವ್ ಜಿಹಾದ್ ಆಗಿರುವ ಶಂಕೆ ವ್ಯಕ್ತವಾಗಿದೆ ಅಂತ ಸಂಘಟನೆಯ ಸದಸ್ಯ ಶಂಕರ್ ಭಟ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗೆ ಹಿಂದೂ ಯುವತಿಯರನ್ನು ಮರುಳು ಮಾಡಿ ಮತಾಂತರ ಮಾಡುವುದೇ ಒಂದು ದೊಡ್ಡ ದಂಧೆಯಾಗಿದ್ದು, ಇದೀಗ ಈ ಪ್ರಕರಣವು ಲವ್ ಜಿಹಾದ್ ಪ್ರಕರಣವೇ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಪೊಲೀಸರು ಸೂಕ್ತ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬಿಳಲಿದೆ.

Share This Article