– ಕುಟುಂಬ ಬಿಟ್ಟು ಕ್ವಾರಂಟೈನ್‍ನಲ್ಲಿ ವಾಸ
ಬೆಳಗಾವಿ: ಕೊರೊನಾ ವಿರುದ್ಧ ವೈದ್ಯರು, ನರ್ಸ್, ಪೊಲೀಸರು ಹಗಲಿರುಳು ಎನ್ನದೇ ಜನರ ಜೀವವನ್ನು ಕಾಪಾಡಲು ಹೋರಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬೆಳಗಾವಿಯ ದಂಪತಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ವೃತ್ತಿಯಲ್ಲಿ ದಾದಿಯರಾಗಿರುವ ಈ ದಂಪತಿ, ತಮ್ಮ ಜೀವದ ಹಂಗು ತೊರೆದು ಬೆಳಗಾವಿ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದಾರೆ.
ಸಂತೋಷ್ ಜನಮಟ್ಟಿ ದಂಪತಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 15 ದಿನಗಳಿಂದ ಹಗಲಿರುಳು ಕೊರೊನಾ ವಿಶೇಷ ವಾರ್ಡಿನಲ್ಲಿ ಸೋಂಕಿತರ ಸೇವೆ ಮಾಡುತ್ತಿದ್ದಾರೆ. 9 ತಿಂಗಳ ಮಗು ಮತ್ತು ವೃದ್ಧ ತಾಯಿಯನ್ನು ಮನೆಯಲ್ಲಿಯೇ ಬಿಟ್ಟು ಕೊವೀಡ್ ವಾರ್ಡಿನಲ್ಲಿ ನರ್ಸಿಂಗ್ ಸೇವೆ ಮಾಡುತ್ತಿದ್ದಾರೆ.
Advertisement
Advertisement
ಸದ್ಯದ ಸನ್ನಿವೇಶದಲ್ಲಿ ಮನೆಗೆ ಹೋಗಲು ಭಯ. ಯಾಕಂದರೆ ಮಗುವಿಗೆ, ವೃದ್ಧೆಗೆ ಎಲ್ಲಿ ಸೋಂಕು ತಗಲುತ್ತೋ ಎಂಬ ಭಯವಿದೆ. ಹೀಗಾಗಿ ಕಳೆದ 15 ದಿನಗಳಿಂದ ಮನೆಗೆ ತೆರಳದೆ ಕೊರೊನಾ ವಾರಿಯರ್ಸ್ ದಂಪತಿ ಕ್ವಾರಂಟೈನ್ ಲಾಡ್ಜ್‌ನಲ್ಲಿ ವಾಸ ಮಾಡುತ್ತಿದ್ದಾರೆ.
Advertisement
ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುವವರು 21 ದಿನ ಮನೆಗೆ ಹೋಗುವಂತಿಲ್ಲ. ಚಿಕಿತ್ಸೆ ನೀಡುವಾಗ ಅಪ್ಪಿ ತಪ್ಪಿ ಸಿಬ್ಬಂದಿಗೆ ಈ ವೈರಸ್ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಇಲ್ಲಿ ಕೆಲಸ ಮಾಡಿದವರನ್ನು ನಿಗಾ ಘಟಕದಲ್ಲಿ ಇರಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತೆ. ಹೀಗಾಗಿ ಡ್ಯೂಟಿ ಮಾಡುವ ನರ್ಸ ದಂಪತಿಗೆ ಮನೆಯಲ್ಲಿರುವ ಅವರ ಮಕ್ಕಳದ್ದೇ ಚಿಂತೆಯಾಗಿದೆ ಎಂದು ಡಾಃ ವಿನಯ ದಾಸ್ತಿಕೊಪ್ಪ ಹೇಳಿದ್ದಾರೆ.
Advertisement
ಕೊರೊನಾ ಎಂದರೆ ಸಾಕು ಜನರು ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ರೋಗಿಯೇ ದೇವರು ಎಂದು ಸೇವೆ ಸಲ್ಲಿಸುತ್ತಿರುವ ದಂಪತಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.