ಬೀದರ್: ಚಲಿಸುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಭೀಕರ ರಸ್ತೆ ಅಪಘಾತವಾಗಿ (Accident) ದಂಪತಿ ಬಲಿಯಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.
ಗುಂಡಪ್ಪ ಬಲಭೀಮ್ ಚಿಟಂಪಲ್ಲೆ (33) ಹಾಗೂ ಪತ್ನಿ ಸುಜಾತ ಗುಂಡಪ್ಪ ಚಿಟಂಪಲ್ಲೆ (29) ಸಾವನ್ನಪ್ಪಿದ ದುರ್ದೈವಿ ದಂಪತಿ. ಬಸವಕಲ್ಯಾಣದ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದ್ದು, ಅಪಘಾತದ ರಭಸಕ್ಕೆ ಪತಿ ಗುಂಡಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಸುಜಾತರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ (Kalaburagi) ರವಾನೆ ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮಹಾಮಳೆಗೆ ಮತ್ತೊಂದು ಬಲಿ
ಮೂಲತ: ಹುಮ್ನಾಬಾದ್ (Humnabad) ತಾಲೂಕಿನ ಹುಡಗಿ ಗ್ರಾಮಕ್ಕೆ ಸೇರಿದ ದಂಪತಿಗೆ 3 ವರ್ಷದ ಮುದ್ದಾದ ಮಗುವಿದೆ. ಘಟನೆ ವೇಳೆ ದಂಪತಿ ಜೊತೆಗಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸವಕಲ್ಯಾಣ ಪೊಲೀಸರು ಅಪರಿಚಿತ ವಾಹನದ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ